ಅನಗತ್ಯ ವಾಹನ ತಪಾಸಣೆಗೆ ಡಿಜಿಪಿ ಬ್ರೇಕ್ ➤ ಬೇಕಾಬಿಟ್ಟಿ ವಾಹನ ತಡೆದು ಅಡ್ಡಿಪಡಿಸದಂತೆ ಸೂಚನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 27. ಸಂಚಾರ ಪೊಲೀಸರು ರಸ್ತೆಯ ಎಲ್ಲೆಂದರಲ್ಲಿ ವಾಹನ ತಡೆದು ತಪಾಸಣೆ ನಡೆಸುವ ನೆಪದಲ್ಲಿ ಉಂಟು ಮಾಡುವ ಕಿರಿಕಿರಿ ತಪ್ಪಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಬ್ರೇಕ್ ಹಾಕಿದ್ದಾರೆ.

ನಗರದಲ್ಲಿ ಬೇಕಾಬಿಟ್ಟಿ ವಾಹನಗಳನ್ನು ತಡೆದು ಸಂಚಾರ ಪೊಲೀಸರು ನಿಲ್ಲಿಸುವಂತಿಲ್ಲ. ಸಿಕ್ಕಸಿಕ್ಕಲ್ಲಿ ಬೈಕ್, ಕಾರುಗಳನ್ನು ಪಕ್ಕಕ್ಕೆ ಹಾಕಿ ಎಂದು ಚಾಲಕರಿಗೆ ಟ್ರಾಫಿಕ್ ಪೊಲೀಸರು ಹೇಳುವಂತಿಲ್ಲ. ಪಾನಮತ್ತ (ಡ್ರಿಂಕ್ & ಡ್ರೈವ್) ಮಾಡುವ ವಾಹನಗಳಿಗೆ ಮಾತ್ರ ತಪಾಸಣೆ ಮಾಡಬೇಕು. ಜೊತೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ಎಂದು ನಗರದ ಪೊಲೀಸ್ ಕಮೀಷನರ್ ಹಾಗೂ ಸಂಚಾರ ಜಂಟಿ ಆಯುಕ್ತರನ್ನು ಟ್ಯಾಗ್ ಮಾಡಿ ಪ್ರವೀಣ್ ಸೂದ್ ಅವರು ಟ್ವೀಟ್ ಮಾಡಿದ್ದಾರೆ.

Also Read  ಮಂಗಳೂರು: ವೇಶ್ಯಾವಾಟಿಕೆ- ಅಪ್ರಾಪ್ತ ವಿದ್ಯಾರ್ಥಿನಿಯರ ರಕ್ಷಣೆ ➤ ಮೂವರು ಆರೋಪಿಗಳು ಅರೆಸ್ಟ್..!

error: Content is protected !!
Scroll to Top