ದೇಗುಲದ ಆವರಣದಲ್ಲೇ ರೌಡಿಶೀಟರ್ ಕೊಲೆ..!

(ನ್ಯೂಸ್ ಕಡಬ) newskadaba.com ಕೆ.ಆರ್.ಪೇಟೆ, ಜೂ. 27. ಇಲ್ಲಿನ ಈಶ್ವರ ದೇಗುಲದ ಆವರಣದಲ್ಲಿ ಯುವಕನೋರ್ವನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯ್ದ ಘಟನೆ ನಡೆದಿದೆ.


ಕೊಲೆಗೀಡಾದ ಯುವಕನನ್ನು ಅರುಣ್ ಎಂದು ಗುರುತಿಸಲಾಗಿದೆ. ಅರುಣ್ ಈ ಹಿಂದೆ ಕೊಲೆ, ಬೆದರಿಕೆ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದೆನ್ನಲಾಗಿದೆ. ಕೊಲೆಗೆ ಹಳೆ ವೈಷಮ್ಯವೇ ಕಾರಣವಾಗಿದ್ದು, ಬೈಕ್ ನಲ್ಲಿ ಬಂದ ಏಳೆಂಟು ಮಂದಿಯ ತಂಡ ಈ ಕೃತ್ಯವೆಸಗಿದೆ‌. ಸ್ಥಳಕ್ಕೆ ಕೆ.ಆರ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕಾರು ಅಪಘಾತ: ಅಪಾಯದಿಂದ ಪಾರು

error: Content is protected !!
Scroll to Top