ನನಗೊಂದು “ವಧುಬೇಕು” ಎಂದು ಬೀದಿಗಳಲ್ಲಿ ಪೋಸ್ಟರ್ ಹಾಕಿಸಿದ ಯುವಕ….!! ➤ ಜಾಲತಾಣದಲ್ಲಿ ಫೋಟೊ ವೈರಲ್

(ನ್ಯೂಸ್ ಕಡಬ) newskadaba.com ಮಧುರೈ, ಜೂ. 27. ‘ನನಗೊಂದು ವಧುಬೇಕು’ ಎಂದು ಬೀದಿಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸುವ ಮೂಲಕ ಯುವಕನೊಬ್ಬ ನಗರದಲ್ಲಿ ಸಂಚಲನ ಮೂಡಿಸಿದ ಘಟನೆ ವರದಿಯಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಫೋಟೋ ವೈರಲ್ ಆಗಿದೆ.


ವಿಲ್ಲಾಪುರಂನ 27 ವರ್ಷದ ಎಂ.ಎಸ್ ಜಗನ್ ಎಂಬಾತ ತನ್ನ ಸಂಗಾತಿಗಾಗಿ ಬೀದಿಗಳಲ್ಲಿ ಪೋಸ್ಟರ್ ಗಳನ್ನು ಹಾಕಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿದ ಆತ, ನಾನು ಮ್ಯಾನೇಜರ್ ಅಷ್ಟೇ ಅಲ್ಲದೇ ಪಾರ್ಟ್ ಟೈಮ್ ಡಿಸೈನರ್ ಕೂಡಾ ಆಗಿದ್ದೇನೆ. ಡಿಸೈನರ್ ಆಗಿ ಕೆಲಸ ಮಾಡುವಾಗಲೇ ನನಗೆ ಈ ಹೊಸ ಕಲ್ಪನೆ ಮೂಡಿತು. ಕಳೆದ ಐದು ವರ್ಷಗಳಿಂದ ನಾನು ವಧುವನ್ನು ಹುಡುಕುತ್ತಿದ್ದು, ಆದರೆ ಯಶಸ್ವಿಯಾಗಲಿಲ್ಲ. ಹಾಗಾಗಿ ನಾನು ಪಟ್ಟಣದಾದ್ಯಂತ ಪೋಸ್ಟರ್ ಗಳನ್ನು ಹಾಕಿದ್ದೇನೆ ಎಂದು ಹೇಳಿದ್ದಾನೆ.

Also Read  ?? Breaking News ದೇಶದಲ್ಲಿ 24 ಗಂಟೆಗಳಲ್ಲಿ 17,296 ಹೊಸ ಕೇಸು ➤ 4.90 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ, 15,301 ಮಂದಿ ಬಲಿ

error: Content is protected !!
Scroll to Top