ವಿದೇಶದಿಂದ ಬಂದ ಯುವಕನನ್ನು ಅಪಹರಿಸಿ ಕೊಲೆ ➤ ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ. 27. ಭಾನುವಾರ ಮಧ್ಯಾಹ್ನ ಗಲ್ಫ್‌’ನಿಂದ ಬಂದಿದ್ದ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಕೊಲೆಗೈದು ಬಳಿಕ ಮೃತದೇಹವನ್ನು ಆಸ್ಪತ್ರೆಯಲ್ಲಿರಿಸಿ ಪರಾರಿಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.


ಹತ್ಯೆಯಾದ ಯುವಕನನ್ನು ಅಬೂಬಕರ್ ಸಿದ್ದೀಕ್ ಎಂದು ಗುರುತಿಸಲಾಗಿದೆ. ಯಾವುದೋ ವ್ಯವಹಾರಕ್ಕೆ ಸಂಬಂಧಿಸಿ ಮೃತ ಯುವಕನ ಅಣ್ಣ ಅನ್ವರ್ ಮತ್ತು ಆತನ ಸಂಬಂಧಿ ಅನ್ಸಾರ್ ಎಂಬಿಬ್ಬರು ಯುವಕರನ್ನು ಎರಡು ದಿನಗಳ ಹಿಂದೆ ಪೈವಳಿಕೆಯ ತಂಡವೊಂದು ಅಪಹರಿಸಿತ್ತು. ಇವರನ್ನು ಬಿಡುಗಡೆ ಮಾಡಬೇಕಾದರೆ ಗಲ್ಫ್‌ನಲ್ಲಿರುವ ಸಿದ್ದೀಕ್ ನನ್ನು ಊರಿಗೆ ಕರೆಸಬೇಕು ಎಂದು ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಸಿದ್ದೀಕ್ ಭಾನುವಾರ ಊರಿಗೆ ಮರಳಿದ್ದರು. ಆದರೆ ಊರಿಗೆ ಬಂದ ಕೆಲವೇ ಗಂಟೆಗಳಲ್ಲಿ ಸಿದ್ದೀಕ್ ಮನೆಯಿಂದಲೇ ಅಪಹರಣಕ್ಕೊಳಗಾಗಿದ್ದರು. ಬಳಿಕ ಸಂಜೆಯ ವೇಳೆಗೆ ಬಂದ್ಯೋಡುನಲ್ಲಿರುವ ಡಿಎಂ ಆಸ್ಪತ್ರೆಗೆ ಸಿದ್ದೀಕ್ ರನ್ನು ಕರೆತಂದ ಅಪಹರಣಕಾರರು, ಆತ ಮೃತಪಟ್ಟಿದ್ದಾನೆ ಎಂದು ತಿಳಿಯುತ್ತಲೇ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇತ್ತ ಎರಡು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಅನ್ವರ್ ಮತ್ತು ಅನ್ಸಾರ್ ಸ್ಥಿತಿಯೂ ಗಂಭೀರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಬೆಳ್ತಂಗಡಿ : ಆಶಾ ಕಾರ್ಯಕರ್ತೆ ಮೇಲೆ ಪತಿಯಿಂದಲೇ ಹಲ್ಲೆ

error: Content is protected !!
Scroll to Top