(ನ್ಯೂಸ್ ಕಡಬ) newskadaba.com ಮರ್ಧಾಳ, ಜೂ. 26. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಕಡಬ ತಾಲೂಕಿನ ಬಿಳಿನೆಲೆ ವಲಯದ 102 ನೆಕ್ಕಿಲಾಡಿ ಒಕ್ಕೂಟದ ವತಿಯಿಂದ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆ ಮರ್ಧಾಳದಲ್ಲಿ ಇಂದು ಪರಿಸರದ ಬಗ್ಗೆ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮವು ಒಕ್ಕೂಟದ ಅದ್ಯಕ್ಷರಾದ ಗಣಪ್ಪಯ್ಯ ಗೌಡ ಪಂಜೋಡಿ ಇವರ ಅದ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಮರ್ದಾಳ ಗ್ರಾಮ ಪಂಚಾಯತ್ ಅದ್ಯಕ್ಷರಾದ ಹರೀಶ್ ಕೋಡಂದೂರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯ ಯೋಜಾನಾಧಿಕಾರಿಯವರಾದ ಮೇದಪ್ಪ ಗೌಡ, ಶಾಲಾ ಮುಖ್ಯಗುರುಗಳಾದ ಶೈಲಾ ಶೈನಿಸ್, ವಲಯ ಮೇಲ್ವಿಚಾರಕರಾದ ಆನಂದ ಡಿ.ಬಿ, ಬಂಟ್ರ ಒಕ್ಕೂಟದ ಅದ್ಯಕ್ಷರಾದ ಸತೀಶ್ಚಂದ್ರ ರೈ, ಬೊಳ್ಳೂರು ಒಕ್ಕೂಟದ ಅದ್ಯಕ್ಷರಾದ ಸತೀಶ್ ಕುಮಾರ್ ಕೋಲಂತಾಡಿ, 102 ನೆಕ್ಕಿಲಾಡಿ ಒಕ್ಕೂಟದ ನೂತನ ಅದ್ಯಕ್ಷರಾದ ವಿನಯ ಜಿ. ಗುರಿಯಡ್ಕ ಹಾಗೂ ಸೇವಾಪ್ರತಿನಿಧಿಗಳಾದ ದಿನೇಶ್ ಮತ್ತು ನೇತ್ರ, ಹಾಗೂ ಒಕ್ಕೂಟದ ಪದಾದಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಶಾಲಾ ಆವರಣದಲ್ಲಿ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯ ನಿರ್ದೇಶಕರಾದ ರೇ| ಪಾದರ್ ಸಕರಿಯಾಸ್ ನಂದಿಯಾರ್ ರವರ ಉಪಸ್ಥಿತಿಯೊಂದಿಗೆ ವಿವಿಧ ಹಣ್ಣುಹಂಪಲುಗಳ ಗಿಡ ನಾಟಿ ಮಾಡಲಾಯಿತು.