ಜ್ವರದಿಂದ ಮಕ್ಕಳು ಮೂರಕ್ಕಿಂತ ಹೆಚ್ಚುದಿನ ಗೈರಾದಲ್ಲಿ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆ ಉಪನಿರ್ದೇಶಕರ ಆದೇಶ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 26. ಮಕ್ಕಳು ಜ್ವರದಿಂದ ಬಳಲಿ ಮೂರಕ್ಕಿಂತ ಹೆಚ್ಚು ದಿನ ಗೈರು ಹಾಜರಾದರೆ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಯ ಗಮನಕ್ಕೆ ತರಲು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ.

ಕಲ್ಲಡ್ಕದ ಒಂದನೇ ತರಗತಿ ಬಾಲಕಿ ಜ್ವರದಿಂದ ಮೃತಪಟ್ಟ ಹಿನ್ನಲೆ ಜಿಲ್ಲಾ ಪಂಚಾಯತ್ ಸಿಇಒ ಡಾ.ಕುಮಾರ್ ರವರ ಸೂಚನೆಯ ಮೇರೆಗೆ ಈ ಆದೇಶವನ್ನು ಹೊರಡಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮುಖ್ಯ ಶಿಕ್ಷಕರಿಗೆ ಈ ಬಗ್ಗೆ ಸೂಚನೆ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

Also Read  ಹಲವು ದಶಕಗಳ ಬೇಡಿಕೆಯಿಂದ ಕೊನೆಗೂ ಬಂತು ಕಡಬಕ್ಕೆ ತಾಲೂಕು ಭಾಗ್ಯ ► ಮಾ. 18 ರಂದು ಕಂದಾಯ ಸಚಿವರಿಂದ ನೂತನ ಕಡಬ ತಾಲೂಕು ಉದ್ಘಾಟನೆ

 

error: Content is protected !!
Scroll to Top