ಅರಂತೋಡು ಸಮಸ್ತ ಸ್ಥಾಪನಾದಿನ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಅರಂತೋಡು, ಜೂ. 26. ಎಸ್ಕೆಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಸಮಸ್ತ ಸ್ಥಾಪನಾದಿನವನ್ನು ಆಚರಿಸಲಾಯಿತು.

ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಆಶಿಕ್ ಅಧ್ಯಕ್ಷತೆ ವಹಿಸಿದ್ದರು. ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಸ್ತದ ಹಾದಿಯಲ್ಲಿ ನಡೆದವರು ಯಾವತ್ತೂ ಸೋಲಲಿಲ್ಲ. ಮಹಾನ್ ವ್ಯಕ್ತಿಗಳು ನಮಗೆ ಸರಿಯಾದ ದಾರಿಯನ್ನು ಹಾಕಿ ಕೊಟ್ಟಿದನ್ನು ನಾವು ಮರೆಯಬಾರದು. ಅಹ್ಲ್ ಸುನ್ನತ್ ಜಮಾಅತ್ ನ ತತ್ವ ಸಿದ್ಧಾಂತವನ್ನು ಅನುಸರಿಸಿ ಮುನ್ನಡೆಯಬೇಕು ಎಂದರು. ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಸ್ ಕೆ ಎಸ್ ಎಸ್ ಎಫ್ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ರಕ್ತದಾನ ಶಿಬಿರ ಸ್ವಚ್ಛತೆ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ವಿಖಾಯ ತಂಡ ಸಮಾಜದಲ್ಲಿ ಒಳ್ಳೆಯ ಕಾರ್ಯಪ್ರವರ್ತಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರವಾಹ ಸಂದರ್ಭದಲ್ಲಿ ಜೀವದ ಹಂಗು ತೊರೆದು ವಿಖಾಯ ತಂಡ ಕೆಲಸ ಮಾಡಿದನ್ನು ಕಂಡಿದ್ದೇವೆ. ವಿಖಾಯ ತಂಡ ಸಮಾಜಕ್ಕೆ ಮಾದರಿಯಾಗಿದೆ. ಆರೋಗ್ಯ ಕ್ಷೇತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ನಿರ್ಗತಿಕರಿಗೆ ಮನೆ ನಿರ್ಮಿಸಿಕೊಂಡುವಂತಹ ಕಾರ್ಯ ಶ್ಲಾಘನೀಯ ಎಂದರು. ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೆಶನ್ ಅಧ್ಯಕ್ಷ ಮಜೀದ್ ಮಾತನಾಡಿ 96 ವರ್ಷಗಳ ಹಿಂದೆ ವರಕ್ಕಲ್ ಮುಲ್ಲಕೋಯ ತಂಙಳ್ ರವರ ದಿವ್ಯ ಹಸ್ತದಿಂದ ಸಮಸ್ತದ ಬೀಜ ಬಿತ್ತಿ ಸದ್ದಿಲ್ಲದೇ ಶತಮಾನೋತ್ಸವ ಆಚರಿಸಲು ಸಜ್ಜಾಗುತ್ತಿದೆ. ಇಸ್ಲಾಂನ ತತ್ವ ಆದರ್ಶಗಳ ಮನವರಿಕೆಯಲ್ಲಿ ಜೀವಿಸಲು ಕಲಿಸಿದ ಸಂಘಟನೆಯಾಗಿದೆ ಸಮಸ್ತ. ಉಲಮಾಗಳು ಯಾವುದೆ ಪ್ರಚಾರ ಪಡೆಯದೇ ಅಹಂ ಇಲ್ಲದೆ ಸಮಸ್ತಕ್ಕೆ ಬೇಕಾಗಿ ಜೀವಿಸಿ ಮರಣ ಹೊಂದಿದವರು ಇದ್ದಾರೆ. ಭಾರತ ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಲು ನ್ಯಾಯವನ್ನು ಒದಗಿಸುತ್ತಾ ಬಂದ ಸಮಸ್ತ ಎಂದು ಹೇಳಿದರು. ವೇದಿಕೆಯಲ್ಲಿ ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಕೆ.ಎಮ್.ಮೂಸಾನ್, ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ಸ-ಈದ್ ಫೈಝಿ, ಸಹ ಅಧ್ಯಾಪಕ ಹಾಜಿ ಸಾಜಿದ್ ಅಝ್ಹರಿ ,ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, ಗುತ್ತಿಗೆದಾರ ಹನೀಫ್ ಉಪಸ್ಥಿತರಿದ್ದರು. ಮುಸ್ತಫಾ ಅರಂತೋಡು, ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಮಾಜಿ ಕಾರ್ಯದರ್ಶಿ ಜುಬೈರ್, ಎಸ್ ಕೆ ಎಸ್ ಬಿವಿ ಅಧ್ಯಕ್ಷ ಅಝರುದ್ದೀನ್, ಕಾರ್ಯದರ್ಶಿ ಅನ್ಸಾಫ್ ಸಣ್ಣಮನೆ, ಅರಂತೋಡು ಶಾಖೆಯ ವಿಖಾಯ ಕನ್ವಿನರ್ ಸಮದ್ ಕೊಡೆಂಕೇರಿ, ಅರಂತೋಡು ಶಾಖೆಯ ಮಾಜಿ ಅಧ್ಯಕ್ಷ ಫಯಾಝ್ ಪಟೇಲ್, ಅರಂತೋಡು ಶಾಖೆಯ ಸಹಚಾರಿ ಕನ್ವೀನರ್ ಮಿಸ್ಬಾ ಕೆ.ಎಮ್ ಮುಂತಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮ ನಂತರ ಮಸೀದಿ ಮತ್ತು ಮದರಸ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು. ಶಾಖೆಯ ಕಾರ್ಯದರ್ಶಿ ಮುಝಮ್ಮಿಲ್ ಸ್ವಾಗತಿಸಿ, ಸುಳ್ಯ  ಕ್ಲಸ್ಟರ್ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ವಂದಿಸಿದರು.

Also Read  ಇಲಿ ಜ್ವರದಿಂದಾಗಿ ಬಿಜೆಪಿ ಕೋಡಿಂಬಾಳ ಬೂತ್ ಸಮಿತಿಯ ಅಧ್ಯಕ್ಷ ಮೃತಪಟ್ಟ ಹಿನ್ನೆಲೆ ► ಮರಳು ನೀತಿಯ ವಿರುದ್ಧ ಬಿಜೆಪಿಯಿಂದ ನಡೆಯಬೇಕಿದ್ದ ಪ್ರತಿಭಟನೆ ರದ್ದು

error: Content is protected !!
Scroll to Top