ಪಂಜ: ಅಗ್ನಿ ಅವಘಡ ➤ ಎರಡು ಅಂಗಡಿಗಳು ಸುಟ್ಟು ಭಸ್ಮ- ಅಪಾರ ನಷ್ಟ

(ನ್ಯೂಸ್ ಕಡಬ) newskadaba.com ಪಂಜ, ಜೂ. 26. ಇಲ್ಲಿನ ಪೇಟೆಯಲ್ಲಿರುವ ರಮೇಶ್ ಪಾಲೋಳಿ ಎಂಬವರ ಮಾಲೀಕತ್ವದ ಕುಕ್ಕೇಶ್ರೀ ಹಾರ್ಡ್ ವೇರ್ ಮತ್ತು ಪಕ್ಕದಲ್ಲಿರುವ ನೂತನ್ ಎಂಬವರ ಮಾಲೀಕತ್ವದ ಕಟ್ಲೇರಿ ಅಂಗಡಿಯೊಳಗೆ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ.

ಎರಡೂ ಅಂಗಡಿಗಳು ಸಂಪೂರ್ಣ ಹೊತ್ತಿ ಉರಿದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದೆನ್ನಲಾಗಿದೆ. ಹಾರ್ಡ್ ವೇರ್ ಅಂಗಡಿಯೊಳಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಈ ಅವಘಡ ಸಂಭವಿಸಿರುವುದಾಗಿ ತಿಳಿದು ಬಂದಿದೆ. ರಾತ್ರಿ10.45ರ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮಾಲೀಕರು, ಸಮೀಪದ ಕಟ್ಟಡದಿಂದ ಪೈಪ್ ಮೂಲಕ ನೀರು ಹಾಯಿಸಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ, ಆದರೂ ಈ ವೇಳೆಗೆ ಎರಡೂ ಅಂಗಡಿಗಳು ಸಂಪೂರ್ಣ ಉರಿದು ಹೋಗಿತ್ತು.

Also Read  ಸುಂಕದಕಟ್ಟೆ ಎಸ್.ಕೆ.ಎಸ್.ಬಿ.ವಿ; ಪದಾಧಿಕಾರಿಗಳ ಆಯ್ಕೆ

error: Content is protected !!
Scroll to Top