ಕಾಂಗ್ರೆಸ್ ಮುಖಂಡನ ಮನೆ ಮೇಲೆ ಬಾಟಲಿ ಎಸೆದ ದುಷ್ಕರ್ಮಿಗಳು ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಹಿರಿಯಡ್ಕ, ಜೂ. 25. ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಲೀಪ್ ಹೆಗ್ಡೆ ಎಂಬವರ ಮನೆ ಮೇಲೆ ಯಾರೋ ದುಷ್ಕರ್ಮಿಗಳು ಬಿಯರ್ ಬಾಟಲ್ ಎಸೆದಿರುವ ಘಟನೆ ಶುಕ್ರವಾರದಂದು ತಡರಾತ್ರಿ ನಡೆದಿದೆ.


ರಾಜಕೀಯ ದುರುದ್ದೇಶಕ್ಕಾಗಿ ದುಷ್ಕರ್ಮಿಗಳು ಮನೆಯ ಮೇಲೆ ಬಿಯರ್ ಬಾಟಲ್ ಎಸೆದು ಬೆದರಿಕೆ ಹಾಕಲಾಗಿದೆ ಎಂದು ದಿಲೀಪ್ ಹೆಗ್ಡೆ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಹಿರಿಯಡ್ಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಅರ್ಹರಲ್ಲದವರ ಕಾರ್ಡ್ ಮಾತ್ರ ರದ್ದು: ಸಿ.ಎಂ.ಸಿದ್ದರಾಮಯ್ಯ

error: Content is protected !!
Scroll to Top