ಹೆದ್ದಾರಿ ಕಾಮಗಾರಿ ಹಿನ್ನೆಲೆ ➤ ನಾಲ್ಕು ತಿಂಗಳ ಶಿರಾಡಿ ಘಾಟ್ ಬಂದ್..?

(ನ್ಯೂಸ್ ಕಡಬ) newskadaba.com ಶಿರಾಡಿ, ಜೂ. 25. ಮಂಗಳೂರು – ಬೆಂಗಳೂರು ಸಂಪರ್ಕಿಸುವ ಶಿರಾಡಿ ರಸ್ತೆಯು, ತೀರಾ ಹದೆಗಟ್ಟಿರುವ ಹಿನ್ನೆಲೆ ಇದರ ದುರಸ್ತಿಗೆ ನಾಲ್ಕು ತಿಂಗಳು ಶಿರಾಡಿ ರಸ್ತೆಯನ್ನು ಬಂದ್ ಮಾಡುವಂತೆ ಗುತ್ತಿಗೆದಾರರು ಅಧಿಕಾರಿಗಳ ಬಳಿ ಬೇಡಿಕೆ ಇಟ್ಟಿದ್ದು, ಆದ್ದರಿಂದ ನಾಲ್ಕು ತಿಂಗಳು ಶಿರಾಡಿ ಘಾಟ್ ರಸ್ತೆ ಬಂದ್ ಆಗುವ ಎಲ್ಲಾ ಸಾಧ್ಯತೆಗಳಿವೆ.


ಶಿರಾಡಿಯಿಂದ ಸಕಲೇಶಪುರಕ್ಕೆ ತೆರಳುವ ರಸ್ತೆಯು ಸಂಪೂರ್ಣ ಹದೆಗೆಟ್ಟಿರುವ ಹಿನ್ನೆಲೆ ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದಾರೆ. ರಸ್ತೆ ದುರಸ್ತಿಗಾಗಿ ನಾಲ್ಕು ತಿಂಗಳು ಶಿರಾಡಿ ರಸ್ತೆಯನ್ನು ಬಂದ್ ಮಾಡುವಂತೆ ಗುತ್ತಿಗೆದಾರರು ಉಭಯ ಜಿಲ್ಲಾಧಿಕಾರಿಗಳಲ್ಲಿ ಆಗ್ರಹಿಸಿದ್ದಲ್ಲದೇ, ಜಿಲ್ಲಾಡಳಿತವು ನಾಲ್ಕು ತಿಂಗಳು ರಸ್ತೆ ಬಂದ್ ಮಾಡಲು ಅವಕಾಶ ನೀಡಿದರಷ್ಟೇ ಕಾಮಗಾರಿ ನಡೆಸುತ್ತೇವೆ ಎಂದು ಹೇಳಿದ್ದಾರೆ. ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಹೆದ್ದಾರಿ ಯೋಜನಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ರಸ್ತೆ ದುರಸ್ತಿ ವೇಳೆ ರಸ್ತೆಯನ್ನು ಬಂದ್ ಮಾಡುವುದು ಅನಿವಾರ್ಯವೇ ಎಂಬುವುದರ ಕುರಿತು ಸರ್ವೆ ನಡೆಸಿ ವರದಿ ನೀಡುವಂತೆ ಉಭಯ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಇನ್ನು ಗುತ್ತಿಗೆದಾರರ ರಸ್ತೆ ಬಂದ್ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ದ.ಕ ಜಿಲ್ಲಾಧಿಕಾರಿ, ಈ ಬಗ್ಗೆ ಶೀಘ್ರವೇ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಹೆದ್ದಾರಿ ಪ್ರಾಧಿಕಾರ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಜತೆ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಶೀಘ್ರವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.

error: Content is protected !!

Join the Group

Join WhatsApp Group