ಲಾರಿ- ಬೈಕ್ ನಡುವೆ ಢಿಕ್ಕಿ ➤ ಐಟಿಐ ವಿದ್ಯಾರ್ಥಿ ಮೃತ್ಯು..!!



(ನ್ಯೂಸ್ ಕಡಬ) newskadaba.com ಕುಂದಾಪುರ, ಜೂ. 25. ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಹೊಸಂಗಡಿ ಕೆರೆಕಟ್ಟೆ ಬಳಿ ನಡೆದಿದೆ.







ಮೃತ ವಿದ್ಯಾರ್ಥಿಯನ್ನು ಗಂಗನಾಡು ಕ್ಯಾತ್ತೂರು ನಿವಾಸಿ ಸೃಜನ್ ನಾಗರಾಜ ಮರಾಠಿ(19) ಎಂದು ಗುರುತಿಸಲಾಗಿದೆ. ಬೈಕ್‌ ಸವಾರ ದಿವಾಕರ ನಾಯ್ಕ (19) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೃಜನ್ ಗಂಗನಾಡಿಂದ ಹೊಸಂಗಡಿ ಅಜ್ಜಿ ಮನೆಗೆ ಬಂದಿದ್ದು, ಸಂಬಂಧಿ ದಿನಕರ ಜತೆ ಬೈಕಲ್ಲಿ ತೆರಳುತ್ತಿದ್ದ ವೇಳೆ ಲಾರಿಯು ಢಿಕ್ಕಿ ಹೊಡೆದಿದೆನ್ನಲಾಗಿದೆ. ಈ ಕುರಿತು ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

error: Content is protected !!
Scroll to Top