ಅಕ್ರಮ ಜಾನುವಾರು ಸಾಗಾಟ ➤ ವಾಹನ ಸಹಿತ ಓರ್ವ ಅಂದರ್

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 25. ಅಕ್ರಮ ಗೋ ಸಾಗಾಟದ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪಿಕಪ್ ಸಹಿತ ಓರ್ವನನ್ನು ವಶಕ್ಕೆ ಪಡೆದ ಘಟನೆ ಮಾಣಿಯಲ್ಲಿ ನಡೆದಿದೆ.

 

ಬಂಧಿತ ಆರೋಪಿಯನ್ನು ಇರಾಮೂಲೆ ನಿವಾಸಿ ಮಹಮ್ಮದ್ ಎಂದು ಗುರುತಿಸಲಾಗಿದೆ. ಹಮೀದ್, ಮತ್ತು ಪವನ್ ರಾಜ್ ಪರಾರಿಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪಿಕಪ್ ವಾಹನ ಹಾಗೂ ದನಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯ ವೇಳೆ ದನಗಳನ್ನು ವದೆ ಮಾಡಿ ಮಾಂಸವನ್ನು ಕೇರಳಕ್ಕೆ ಸಾಗಾಟ ಮಾಡುವ ಉದ್ದೇಶದಿಂದ ಪವನ್‌ ರಾಜ ಎಂಬವರ ಮನೆಗೆ ಜಾನುವಾರುಗಳನ್ನು ಪಿಕಪ್‌ ವಾಹನಕ್ಕೆ ತುಂಬಿಸಿ ಕೊಂಡೊಯ್ಯಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

Also Read  ಕೆರೆಯಲ್ಲಿ ಮುಳುಗಿ ವ್ಯಕ್ತಿ ಮೃತ್ಯು ➤ 30 ಅಡಿಯಷ್ಟು ನೀರಿನಲ್ಲಿ ತಳಹಿಡಿದಿದ್ದ ಮೃತದೇಹ...!

error: Content is protected !!
Scroll to Top