ಪಂಜ: ಅಕ್ರಮ ಮದ್ಯ ಸಾಗಾಟ ಪ್ರಕರಣ ➤ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 25. ಸ್ಕೂಟರ್ ನಲ್ಲಿ ಅಕ್ರಮ ಮದ್ಯ ಸಾಗಾಟ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಮೇ. 19ರಂದು ಪಂಜದಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಆಕ್ಟಿವಾ ಸ್ಕೂಟರ್‌ನಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ್ದು, ಈ ಸಂದರ್ಭ ಆರೋಪಿ ಸುಳ್ಯ ಪಂಬೆತ್ತಡಿ ಗ್ರಾಮದ ಪುಟ್ಟಣ್ಣ ಗೌಡ ಎಂಬವರು ಪರಾರಿಯಾಗಿದ್ದರು. ಈ ಕುರಿತು ಪೊಲೀಸರು ಆರೋಪಿ ವಿರುದ್ಧ ಅಬಕಾರಿ ಕಾಯ್ದೆ 1965ರ ಕಲಂ 11,12, 14ರ ಉಲ್ಲಂಘನೆ ಮತ್ತು ಕಲಂ 32(1), 38(ಎ) ಹಾಗೂ 43(ಎ)ರಡಿ ಪ್ರಕರಣ ದಾಖಲಿಸಿದ್ದರು. ಇದೀಗ ಆರೋಪಿ ಪುಟ್ಟಣ್ಣ ಗೌಡ ಅವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಹರೀಶ್ ಕುಮಾರ್ ಬಳಕ್ಕ ಮತ್ತು ದೀಪಕ್ ಬೊಳುವಾರು, ಅಕ್ಷತಾ ಬನಾರಿ ವಾದಿಸಿದ್ದರು.

Also Read  ಸವಣೂರು: ಶ್ರೀ ಕ್ಷೇ.ಧ.ಗ್ರಾ.ಯೋ.ಯ ಮೇಲ್ವಿಚಾರಕಿಗೆ ಬೀಳ್ಕೊಡುಗೆ

 

error: Content is protected !!
Scroll to Top