ಮಂಗಳೂರು ನಗರದಿಂದ ಏರ್ಪೋರ್ಟ್ ಗೆ ಸಾರಿಗೆ ಬಸ್ ವ್ಯವಸ್ಥೆ ➤ ಬಹುದಿನಗಳ ಬೇಡಿಕೆ ಈಡೇರಿಕೆಗೆ ಸಾರಿಗೆ ಸಚಿವರ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 25. ಮಂಗಳೂರು ನಗರದಿಂದ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಮಾಡಬೇಕು ಎಂಬ ಬಹುದಿನಗಳ ಕನಸು ಕೊನೆಗೂ ಈಡೇರುವ ಕಾಲ ಬಂದಿದೆ.


ಬೆಂಗಳೂರು ನಗರದಿಂದ ದೇವನಹಳ್ಳಿ ಏರ್ಪೋರ್ಟ್ ಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿರುವಂತೆ ಮಂಗಳೂರಿನಲ್ಲಿಯೂ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ದೆಹಲಿ ಪತ್ರಕರ್ತರಿಬ್ಬರು ಸಚಿವ ಶ್ರೀರಾಮುಲುರವರಿಗೆ ಮನವಿ ನೀಡಿದ್ದರು. ಈ ಹಿನ್ನೆಲೆ ಸಚಿವರು ಬಸ್ ವ್ಯವಸ್ಥೆ ಏರ್ಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಬಗ್ಗೆ ಸಾರಿಗೆ ಇಲಾಖೆಯ ಕಾರ್ಯದರ್ಶಿ ಪುಷ್ಪಾ ವಿ.ಎಸ್, ಸಾರಿಗೆ ನಿಗಮಕ್ಕೆ ಆದೇಶ ಪತ್ರ ಬರೆದಿದ್ದು, ತುರ್ತಾಗಿ ಬಸ್ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ. ಈ ಆದೇಶದ ಪ್ರಕಾರ ಬಿಎಂಟಿಸಿಯಿಂದ ಹೆಚ್ಚುವರಿ ಇರುವ ಮೂರು ಬಸ್ ಗಳನ್ನು ಎರವಲು ಪಡೆದು ಮಂಗಳೂರಿನಲ್ಲಿ ಬಸ್ ವ್ಯವಸ್ಥೆ ಏರ್ಪಡಿಸುವಂತೆ ಸೂಚಿಸಲಾಗಿದೆ.

Also Read  ಚಿಕಿತ್ಸೆ ನೀಡುವಾಗಲೇ ವ್ಯಕ್ತಿ ಮೃತ್ಯು…!

error: Content is protected !!
Scroll to Top