(ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ, ಜೂ. 24. ಸತತವಾಗಿ ಶೂನ್ಯ ಮತ್ತು ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳನ್ನು ಬೇಡಿಕೆ ಇರುವ ಸರಕಾರಿ ಪ್ರೌಢ ಶಾಲೆಗಳಿಗೆ ಹುದ್ದೆ ಸಮೇತ ಸ್ಥಳಾಂತರಿಸಿ ಸರಕಾರಿ ಪ.ಪೂ.ಕಾಲೇಜುಗಳಾಗಿ ಮೇಲ್ದರ್ಜೇಗೇರಿಸಿ ಸರಕಾರ ಆದೇಶ ಹೊರಡಿಸಿದೆ.
ಅದರಂತೆ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಪದವಿ ಪೂರ್ವ ಕಾಲೇಜು ಸಹಿತ ಜಿಲ್ಲೆಯ ಎರಡು ಶಾಲೆ ಸೇರಿದಂತೆ ರಾಜ್ಯದಲ್ಲಿ ಒಟ್ಟು ಏಳು ಸರಕಾರಿ ಪಿಯು ಕಾಲೇಜುಗಳು ಸ್ಥಳಾಂತರಗೊಳ್ಳಲಿವೆ. ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಸ.ಪ.ಪೂ. ಕಾಲೇಜು ಕೋಲಾರ ಜಿಲ್ಲೆಯ ಬಂಗಾರು ತಿರುಪತಿಗೆ ಹಾಗೂ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಸ.ಪ.ಪೂ. ಕಾಲೇಜು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ಪಡಕೆರೆಗೆ ಸ್ಥಳಾಂತರಗೊಳ್ಳಲಿದೆ.