ಸಾರ್ವಜನಿಕರ ಠೇವಣಿ ಹಣವನ್ನು ಪ್ರೇಯಸಿಯ ಅಕೌಂಟ್ ಗೆ ಟ್ರಾನ್ಸ್‌ಫರ್ ಮಾಡಿದ ಬ್ಯಾಂಕ್ ಮ್ಯಾನೇಜರ್..!! ➤ ಒಂದೇ ವಾರದಲ್ಲಿ ಆಕೆಗೆ ಕಳುಹಿಸಿದ್ದೆಷ್ಟು ಕೋಟಿ ಗೊತ್ತಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 24. ಯುವತಿಯ ಜೊತೆ ಪ್ರೇಮದ ಬಲೆಗೆ ಬಿದ್ದ ಬ್ಯಾಂಕ್‌ ಮ್ಯಾನೇಜರ್ ಓರ್ವ ಸಾರ್ಜನಿಕರ ಹಣವನ್ನು ಮನಬಂದಂತೆ ಆಕೆಯ ಖಾತೆಗೆ ವರ್ಗಾಯಿಸಿದ ಘಟನೆ ಬೆಳಕಿಗೆ ಬಂದಿದೆ.


ಠೇವಣಿದಾರರ ಹೆಸರಿನಲ್ಲಿ ಸಾಲ ಪಡೆದ ಬ್ಯಾಂಕ್​ ವ್ಯವಸ್ಥಾಪಕ ಹರಿಶಂಕರ್ ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯವಾದ ಯುವತಿಗೆ ಕೇವಲ 6 ದಿನದಲ್ಲಿ ಬರೋಬ್ಬರಿ 5.70 ಕೋಟಿ ರೂ. ಕಳುಹಿಸಿ ಕೊಟ್ಟಿದ್ದಾನೆ. ಇದೀಗ ಮ್ಯಾನೇಜರ್ ಬಣ್ಣ ಬಯಲಾಗಿದ್ದು ಹನುಮಂತನಗರ ಪೊಲೀಸರ ವಶದಲ್ಲಿದ್ದಾನೆ. ಹಣ ವರ್ಗಾಯಿಸಿದ ವಿಷಯ ತಿಳಿದ ಅಧಿಕಾರಿಗಳು ತನಿಖೆ ನಡೆಸಿದಾಗ ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದಿರುವುದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಹರಿಶಂಕರ್, ಬ್ಯಾಂಕ್ ಸಹಾಯಕ ವ್ಯವಸ್ಥಾಪಕಿ ಹಾಗೂ ಓರ್ವ ಕ್ಲರ್ಕ್ ನ್ನು ಬಂಧಿಸಲಾಗಿದೆ.

Also Read  ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸೀಮೆಎಣ್ಣೆ ಕುಡಿದು ವ್ಯಕ್ತಿ ಮೃತ್ಯು..!

error: Content is protected !!
Scroll to Top