ಏಕಾಏಕಿ ಹಂಪ್ ಹಾರಿಸಿದ ಬಸ್ ಚಾಲಕ..! ➤ ಕಂಡಕ್ಟರ್ ಕಾಲು ಮುರಿತ

(ನ್ಯೂಸ್ ಕಡಬ) newskadaba.com ಕುಣಿಗಲ್, ಜೂ. 24. ಚಾಲಕನೋರ್ವ ರಸ್ತೆ ಹಂಪ್‌ ನಲ್ಲಿ ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಕಾರಣ ನಿರ್ವಾಹಕನ ಕಾಲು ಮುರಿದ ಘಟನೆ ತಾಲೂಕಿನ ಹಳೆಯ ರಾ.ಹೆ 48 ಗೊಟ್ಟಿಕೆರೆ ಸಮೀಪ ಶುಕ್ರವಾರದಂದು ನಡೆದಿದೆ.


ನಿರ್ವಾಹಕನನ್ನು ಕೋಲಾರ ವಿಭಾಗದ ಬಸ್ ನಿರ್ವಾಹಕ ಸಂಗಪ್ಪ ಹಕ್ಕಿ (45) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಧರ್ಮಸ್ಥಳದಿಂದ ಹೊರಟ ಬಸ್ ಕುಣಿಗಲ್ ಮಾರ್ಗವಾಗಿ ಕೋಲಾರಕ್ಕೆ ತೆರಳುತ್ತಿದ್ದ ವೇಳೆ ಕುಣಿಗಲ್ ತಾಲೂಕಿನ ಗೊಟ್ಟಿಕೆರೆ ಎಂಬಲ್ಲಿ ಚಾಲಕ ಮಹತೇಶ್ ಏಕಾಏಕಿ ಹಂಪ್‌ ಹಾರಿಸಿದ ಕಾರಣ ಬಸ್ ನಲ್ಲಿ‌ ನಿಂತಿದ್ದ ನಿರ್ವಾಹಕ ಸಂಗಪ್ಪನ ಕಾಲಿನ ಮೂಳೆ ಮುರಿತಕ್ಕೊಳಗಾಗಿದೆ. ಕೂಡಲೇ ಗಾಯಾಳುವನ್ನು ಕುಣಿಗಲ್‌ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.

Also Read  ➤ ಉಪ್ಪಿನಂಗಡಿ ಕಾಲು ಜಾರಿ ನದಿಗೆ ಬಿದ್ದು ಬಾಲಕ ಮೃತ್ಯು..!

error: Content is protected !!
Scroll to Top