ಕುಡಿದ ಮತ್ತಿನಲ್ಲಿ ವಧುವಿನ ಬದಲು ಆಕೆಯ ಅತ್ತಿಗೆಗೆ ಹಾರ ಹಾಕಿದ ವರ..! ➤ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜೂ. 24. ಕಂಠಪೂರ್ತಿ ಕುಡಿದು ಮದುವೆ ಮಂಟಪಕ್ಕೆ ಬಂದ ವರನೋರ್ವ ವಧುವಿಗೆ ಹಾರ ಹಾಕುವ ಬದಲು ಆಕೆಯ ಅತ್ತಿಗೆಯ ಕೊರಳಿಗೆ ಹಾರ ಹಾಕಿದ ಘಟನೆ ಉತ್ತರಪ್ರದೇಶದ ಹಮೀರ್ ಪುರದಲ್ಲಿ ನಡೆದಿದೆ.

ಕಂಠಪೂರ್ತಿ ಕುಡಿದು ತೂರಾಡುತ್ತಾ ಮದುವೆ ಮಂಟಪಕ್ಕೆ ಬಂದಿದ್ದ ಆತನನ್ನು ಹಿಂದಿನಿಂದ ವ್ಯಕ್ತಿಯೋರ್ವ ಹಿಡಿದುಕೊಂಡಿದ್ದು, ಈ ಸ್ಥಿತಿಯಲ್ಲೇ ಮದುವೆ ಶಾಸ್ತ್ರಗಳು ನಡೆದಿವೆ. ಈ ವೇಳೆ ವಧು ವರನ ಕುತ್ತಿಗೆಗೆ ಹಾರ ಹಾಕಿದ್ದು, ಬಳಿಕ ವರನಲ್ಲಿ ಹಾರ ಹಾಕುವಂತೆ ಹೇಳಿದಾಗ ಆತ ವಧುವಿನ ಬದಲು ಆಕೆಯ ಅತ್ತಿಗೆಗೆ ಹಾರ ಹಾಕಿದ್ದಾನೆ‌. ಇದರಿಂದ ಕೋಪಗೊಂಡ ಅತ್ತಿಗೆ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಬಳಿಕ ಅತ್ತಿಗೆಯ ಕತ್ತಿನಿಂದ ಹಾರ ತೆಗೆದು ವಧುವಿನ ಕುತ್ತಿಗೆಗೆ ಹಾಕಿದ್ದಾನೆ. ಇದೀಗ ಹಾರ ಹಾಕುತ್ತಿರುವ ವೀಡಿಯೋ ಸದ್ಯ ವೈರಲ್ ಆಗಿದೆ.

Also Read  ಯಶಸ್ವಿ 'ಆಪರೇಷನ್ ಚೀತಾ' ಕಾರ್ಯಾಚರಣೆಗೆ ಊರವರ ಸಾಥ್ ➤ ಬಾವಿಯಿಂದ ಬೋನಿಗೆ ಬಿದ್ದ ಚಿರತೆ

error: Content is protected !!
Scroll to Top