(ನ್ಯೂಸ್ ಕಡಬ) newskadaba.com ಪಣಜಿ, ಜೂ. 24. ಕೈದಿಗಳಿಗೆ ಮಾದಕ ದ್ರವ್ಯ ಕೋಕೇನ್ ಪೂರೈಸುತ್ತಿದ್ದ ಆರೋಪಕ್ಕೆ ಸಂಬಂಧಿಸಿ ಜೈಲು ಸಿಬ್ಬಂದಿಯೋರ್ವನನ್ನು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಜೈಲುಸಿಬ್ಬಂದಿಯನ್ನು ಸೂರಜ್ ಗಾವಡೆ ಎಂದು ಗುರುತಿಸಲಾಗಿದೆ. ಜೈಲು ಸಿಬ್ಬಂದಿಗಳು ಪಿಐ ಪ್ರಶಾಂತ ಜೋಶಿರವರ ನೇತೃತ್ವದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಜೈಲು ಸಿಬ್ಬಂದಿ ಸೂರಜ್ ಗಾವಡೆ ಎಂಬಾತ ಅನುಮಾನಾಸ್ಪದವಾಗಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ಕುರಿತು ಪಿಐ ಸುಶಾಂತ್ ಜೋಶಿ ನೇತೃತ್ವದ ತಂಡ ಮಾಪ್ಸಾ ಪೋಲಿಸರಿಗೆ ಮಾಹಿತಿ ನೀಡಿದ ನಂತರ ಕೋಲ್ವಾ ಪೋಲಿಸರು ಜೈಲು ಸಿಬ್ಬಂದಿ ಸೂರಜ್ ಗಾವಡೆಯನ್ನು ಬಂಧಿಸಿದ್ದಾರೆ.