ಅಕ್ರಮ ಜಾನುವಾರು ಸಾಗಾಟ ➤ ವಾಹನ, ಜಾನುವಾರು ಸಹಿತ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬಜಪೆ, ಜೂ. 24. ಪಿಕಪ್ ವಾಹನವೊಂದರಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರರಣಕ್ಕೆ ಸಂಬಂಧಿಸಿ ವಾಹನ ಹಾಗೂ ಜಾನುವಾರು ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಬಡಗ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ದಡ್ಡಿ ಕ್ರಾಸ್ ಬಳಿ ನಡೆದಿದೆ.


ಬಂಧಿತ ಆರೋಪಿಗಳನ್ನು ಪುತ್ತಿಗೆ ಹಂಡೇಲು ಜರೀನಾ ಮಂಜಿಲ್‌ನ ಅಬ್ದುಲ್ ಫಾರೂಕ್ (41), ಬಡಗ ಮಿಜಾರಿನ ಅಬೂಬಕ್ಕರ್ (45) ಹಾಗೂ ತೋಡಾರು ದರ್ಖಾಸ್ ಹೌಸ್ ಶಿವ(60) ಎಂದು ಗುರುತಿಸಲಾಗಿದೆ. ಬಂಧಿತರಿಂದ ಸಾಗಾಟಕ್ಕೆ ಬಳಸಿದ ಪಿಕ್ ಅಪ್ ಹಾಗೂ 4 ದನಗಳ ಸಹಿತ ಒಟ್ಟು 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಪಟ್ರಮೆ: ದಾಖಲೆಯಲ್ಲಿದ್ದ ತೋಡನ್ನು ತಿರುಗಿಸಿ ಕೃಷಿಗೆ ಹಾನಿ ► ಕುಸಿಯುವ ಭೀತಿಯಲ್ಲಿ ಮನೆಯ ಕೊಟ್ಟಿಗೆ - ಕಂದಾಯ ಇಲಾಖೆಯಿಂದ ನಿರ್ಲಕ್ಷ್ಯ

error: Content is protected !!
Scroll to Top