(ನ್ಯೂಸ್ ಕಡಬ) newskadaba.com ಅರಂತೋಡು, ಜೂ. 23. ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಚಲನವಲನದ ಬಗ್ಗೆ ತಂದೆ-ತಾಯಿಯರು ಸೂಕ್ಷ್ಮವಾಗಿ ತಿಳಿದು ಮಾರ್ಗದರ್ಶನ ನೀಡಬೇಕು. ಅನಗತ್ಯ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು ಎಂದು ಕಾಲೇಜಿನ ಸಂಚಾಲಕ ಕೆ.ಆರ್ ಗಂಗಾಧರ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಂಶುಪಾಲರಾದ ಶ್ರೀ ರಮೇಶ್ ಸ್ವಾಗತಿಸಿ, ವರ್ಷದ ಶೈಕ್ಷಣಿಕ ಚಟುವಟಿಕೆಗಳ ಕುರಿತು ಪೋಷಕರಿಗೆ ಮಾರ್ಗದರ್ಶನ ನೀಡಿದರು. ಭೌತಶಾಸ್ತ್ರ ಉಪನ್ಯಾಸಕ ಸುರೇಶ್ ವಾಗ್ಲೆ ವಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಕಾರ್ಯಕ್ರಮ ನಿರೂಪಿಸಿದರು. ಇತಿಹಾಸ ಉಪನ್ಯಾಸಕ ಶ್ರೀ ಮೋಹನ್ ಚಂದ್ರ, ದೈಹಿಕ ಶಿಕ್ಷಣ ಉಪನ್ಯಾಸಕಿ ಶ್ರೀಮತಿ ಶಾಂತಿ, ಗಣಿತ ಉಪನ್ಯಾಸಕಿ ಭಾಗ್ಯಶ್ರೀ, ಕಂಪ್ಯೂಟರ್ ಉಪನ್ಯಾಸಕಿ ಕುಮಾರಿ ನಯನಾ ಹಾಗೂ ಶ್ರೀಮತಿ ಬೃಂದಾ ಸಹಕರಿಸಿದರು.