ಆತ್ಮಹತ್ಯೆಗೈಯ್ಯಲು ಮಂಗಳೂರಿನಿಂದ ಉಡುಪಿಗೆ ತೆರಳಿದ ವ್ಯಕ್ತಿ..!? ➤ ಸಮಾಸೇವಕರಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಉಡುಪಿ, ಜೂ. 22. ಉಡುಪಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಂಗಳೂರು ಮೂಲದ ವ್ಯಕ್ತಿಯೊರ್ವರು ಸಾರ್ವಜನಿಕರ ಸಮಯಪ್ರಜ್ಞೆಯಿಂದ ಬದುಕುಳಿದಿರುವ ಘಟನೆ ಬುಧವಾರದಂದು ನಡೆದಿದೆ.


ಹೋಟೆಲಿನಲ್ಲಿ ಬಾಣಸಿಗರಾಗಿ ಕೆಲಸದಲ್ಲಿದ್ದ ಮಂಗಳೂರಿನ ವ್ಯಕ್ತಿ, ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಉಡುಪಿಯ ಖಾಸಗಿ ವಸತಿಗೃಹಗಳಲ್ಲಿ ಸ್ಥಳ ಹುಡುಕುತ್ತಿದ್ದರು ಎನ್ನಲಾಗಿದೆ. ಈ ಕುರಿತು ವಿಷಯ ತಿಳಿದ ಉಡುಪಿಯ ಸಮಾಜಸೇವಕರು ವ್ಯಕ್ತಿಯನ್ನು ರಕ್ಷಿಸಿ, ಮನವೊಲಿಸಿ ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!
Scroll to Top