ಮಂಗಳೂರು: ರೈಲ್ವೇ ನೌಕರರಿಗೆ ನಕಲಿ ಸರ್ಟಿಫಿಕೇಟ್ ನೀಡಿದ್ದ ಆರೋಪಿಯ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ..!!

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 21. ರೈಲ್ವೇ ನೌಕರರಿಗೆ ನಕಲಿ ವೈದ್ಯಕೀಯ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ ಪ್ರಕರಣದಲ್ಲಿ ಸಿಬಿಐ ನಿಂದ ಬಂಧಿತನಾಗಿರುವ ರೈಲ್ವೇ ಇಲಾಖೆಯ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್‌ ವಿಜಯನ್‌ ವಿ.ಎ ಅವರ ಮೃತದೇಹವು ತೊಕ್ಕೊಟ್ಟು ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ.

ಮಂಗಳೂರಿನಲ್ಲಿ ರೈಲ್ವೇ ಸಿಬ್ಬಂದಿಗಳಿಗೆ ನಕಲಿ ಫಿಟ್ನೆಸ್ ಸರ್ಟಿಫಿಕೇಟ್ ನೀಡುತ್ತಿದ್ದ ಜಾಲವೊಂದನ್ನು ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಪತ್ತೆಮಾಡಿತ್ತು. ಈ ಪ್ರಕರಣದಲ್ಲಿ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಹಾಗೂ ಆತ್ಮಹತ್ಯೆ ನಡೆಸಿದ ಫಾರ್ಮಸಿಸ್ಟ್‌ ವಿಜಯನ್‌ ಸೇರಿದಂತೆ ಇನ್ನೋರ್ವನನ್ನು ಬಂಧಿಸಿದ್ದರು. ಇದೀಗ ಸಿಬಿಐ ವಶದಲ್ಲಿದ್ದ ಆರೋಪಿ ಫಾರ್ಮಸಿಸ್ಟ್‌ ವಿಜಯನ್‌ ವಿ.ಎ ಅವರ ಮೃತದೇಹವು ತೊಕ್ಕೊಟ್ಟು ಗಣೇಶನಗರದ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ಇವರು ಚಲಿಸುತ್ತಿರುವ ರೈಲಿನಿಂದ ಹಾರಿ ಆತ್ಮಹತ್ಯೆ ನಡೆಸಿರುವುದಾಗಿ ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ರೈಲ್ವೇ ಹಾಗೂ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಬಂಟ್ವಾಳ: ಗಾಂಜಾ ಸೇವನೆ - ಆರೋಪಿ ಸಹಿತ ಗಾಂಜಾ ವಶಕ್ಕೆ

error: Content is protected !!
Scroll to Top