(ನ್ಯೂಸ್ ಕಡಬ) newskadaba.com ಮಾಣಿ, ಜೂ. 21. ಹಜ್ಜ್ ಕರ್ಮ ನಿರ್ವಹಿಸಲು ಬೇಕಾಗುವ ಸಂಪತ್ತು ತನ್ನ ಬಳಿ ಇದ್ದು ಹಜ್ ನಿರ್ವಹಿಸದೇ ಮರಣ ಹೊಂದುವವನು ದೌರ್ಭಾಗ್ಯವಂತನಾಗಿರುವನು. ಇದು ಚಿಂತಿಸಬೇಕಾದ ವಿಷಯವಾಗಿದೆ. ಅದೇ ರೀತಿ ಉಳುಹಿಯ್ಯತ್ ನೀಡಲು ಉತ್ಸಾಹ ತೋರಿರಿ ಅದು ನಿಮ್ಮ ಜೀವನದಲ್ಲಿ ಬರ್ಕತ್ ನೀಡುವುದರೊಂದಿಗೆ ನಾಳೆ ಪರಲೋಕದಲ್ಲಿ ಸಿರಾತ್ ಸೇತುವೆ ದಾಟಲು ವಾಹನವಾಗಿ ನೆರವಾಗುತ್ತದೆ ಎಂಬ ಹದೀಸನ್ನು ಮರೆಯದಿರಿ ಎಂದು ಅಬ್ದುಲ್ ರಝಾಕ್ ಮದನಿ ಅಲ್ ಕಾಮಿಲ್ ಸಖಾಫಿ ಮಂಜನಾಡಿ ಹೇಳಿದರು.
ಅವರು ಸುನ್ನೀ ಯುವಜನ ಸಂಘ ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಸೂರಿಕುಮೇರು ಇದರ ವತಿಯಿಂದ ನಡೆದ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್‌ಗೆ ನೇತೃತ್ವ ನೀಡಿ ಹಜ್ಜ್ ಕರ್ಮ ಮತ್ತು ಉಳುಹಿಯ್ಯತ್ ಎಂಬ ವಿಷಯದಲ್ಲಿ ತರಗತಿ ನಡೆಸಿಕೊಟ್ಟರು. ಅಶ್ರಫ್ ಸಖಾಫಿ ಸೂರಿಕುಮೇರು ದುಆ ನಡೆಸಿದರು. ಕಾರ್ಯಕ್ರಮದಲ್ಲಿ ಮಾಣಿ ಸೆಂಟರ್ ಸಾಂತ್ವನ ಕಾರ್ಯದರ್ಶಿ ಎಸ್ ಆರ್ ಸುಲೈಮಾನ್ ಸೂರಿಕುಮೇರು, ಹಾಜಿ ಯೂಸುಫ್ ಸೂರಿಕುಮೇರು, ಹಂಝ ಸೂರಿಕುಮೇರು, ಹಮೀದ್ ಮಾಣಿ, ನಿಝಾಂ ಸಅದಿ ಸೂರಿಕುಮೇರು, ಬ್ರಾಂಚ್ ಇಸಾಬಾ ಸೆಕ್ರೆಟರಿ ಹನೀಫ್ ಸಂಕ ಸೂರಿಕುಮೇರು, ಅಝೀಂ ಸೂರಿಕುಮೇರು, ಆಸಿಫ್ ಸಂಕ, ಉಮ್ಮರ್ ಫಾರೂಕ್ ಸೂರಿಕುಮೇರು, ಇಬ್ರಾಹಿಂ ಮಾಣಿ, ಮುನೀರ್ ಮಾಣಿ, ಅಜ್ಮಲ್ ಮಾಣಿ, ಸ್ವಾದಿಕ್ ಯೂಸುಫ್ ಸೂರಿಕುಮೇರು, ಹಬೀಬ್ ಯೂಸುಫ್ ಸೂರಿಕುಮೇರು, ಫಾರೂಕ್ ಯೂಸುಫ್ ಸೂರಿಕುಮೇರು ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್ ಕರೀಂ ಸೂರಿಕುಮೇರು ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.