ಪತಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಪತ್ನಿ ಪರಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 21. ಪತಿಯನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟು ಪತ್ನಿ ಪರಾರಿಯಾದ ಕುರಿರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಶಿಲ್ಪಾ ಎಂಬಾಕೆ ತನ್ನ ಪತಿಯೊಂದಿಗೆ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಹೋಗುವುದಕ್ಕಾಗಿ ಮಂಗಳೂರಿನ ಸರ್ವೀಸ್‌ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಆದರೆ ಬಸ್‌ ಹತ್ತುವ ಮೊದಲು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಶಿಲ್ಪಾ ಹಿಂದಿರುಗಿ ಬರದೇ ಇದ್ದುದನ್ನು ಗಮನಿಸಿದ ಪತಿ ಕೂಡಲೇ ಶಿಲ್ಪಾ ಮೊಬೈಲ್‌ಗೆ ಕರೆ ಮಾಡಿದ್ದು ಆಕೆ ಉತ್ತರಿಸಲಿಲ್ಲ. ಬಳಿಕ ಮೊಬೈಲ್‌ ಸ್ವಿಚ್ ಆಫ್ ಆಗಿದೆ ಪೊಲೀಸರಿಗೆ ದೂರು ನೀಡಿದ್ದಾರೆ.

Also Read  ‘ಕನ್ನಡ ಪುಸ್ತಕಗಳಿಂದ ಬೌದ್ದಿಕ ಶ್ರೀಮಂತಿಕೆ’

 

error: Content is protected !!
Scroll to Top