ಜೀಪು ಪಲ್ಟಿ- ಯುವತಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 20. ಚಲಿಸುತ್ತಿದ್ದ ಜೀಪೊಂದು ಸ್ಕಿಡ್ ಆದ ಪರಿಣಾಮ ಯುವತಿ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಮುಂಡ್ಕೂರು ಸಂಕಲಕರಿಯಲ್ಲಿ ನಡೆದಿದೆ.

ಬೆಳ್ಮಣ್- ಸಂಕಲಕರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆಯಲ್ಲಿ ಭಾಸ್ಕರ ಎಂಬವರು ತನ್ನ ಜೀಪು ಚಲಾಯಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ತಿರುವಿನಲ್ಲಿ ಜೀಪ್ ಪಲ್ಟಿ ಆಗಿದೆ. ಈ ಸಂದರ್ಭ ಜೀಪ್ ನಲ್ಲಿ ಚಾಲಕ ಸಹಿತ ಐದು ಜನರಿದ್ದು ಯುವತಿಯೋರ್ವಳು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆದರೆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Also Read  ಕಡಬ: ರಿಕ್ಷಾ ಸ್ಕಿಡ್- ಚಾಲಕನಿಗೆ ಗಾಯ

error: Content is protected !!
Scroll to Top