ನಾಳೆ ರಾಜ್ಯಾದ್ಯಂತ ಅರ್ಧ ದಿನ ಶಾಲೆ ನಡೆಸಲು ಇಲಾಖೆ ಸೂಚನೆ ➤ ಶನಿವಾರದಂದು ಪುಲ್ ಕ್ಲಾಸ್..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 20. ನಾಳೆ ಎಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ರಾಜ್ಯಾದ್ಯಂತ ಆಚರಣೆಗೆ ಭರದ ಸಿದ್ದತೆಗಳು ನಡೆದಿದೆ. ಇನ್ನು ಶಾಲಾ ಕಾಲೇಜುಗಳಲ್ಲಿ ಕೂಡಾ ಆಚರಣೆ ಮಾಡುವಂತೆ ಈಗಾಗಲೇ ಶಿಕ್ಷಣ ಇಲಾಖೆಯು ಖಡಕ್ ಸಂದೇಶವನ್ನು ನೀಡಿದ್ದು ಇದರ ನಡುವೆ ನಾಳೆ ಅರ್ಧ ದಿನ ಶಾಲೆಗಳನ್ನು ನಡೆಸುವಂತೆ ಇಲಾಖೆ ಆದೇಶವನ್ನು ಹೊರಡಿಸಿದೆ.

ಈ ಕುರಿತಂತೆ ಇಲಾಖಾ ಆಯುಕ್ತರು ನಾಳೆ ಅರ್ಧ ದಿನ ಶಾಲೆಗಳನ್ನು ನಡೆಸಿ, 25-6-22 ರ ಶನಿವಾರ ದಿನದಂದು ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ನಡೆಸಲು ಆದೇಶ ನೀಡಿದ್ದಾರೆ.

Also Read  ಪುತ್ತೂರು: ಕುಡಿದ ಮತ್ತಿನಲ್ಲಿ ತಮ್ಮನನ್ನು ಕೊಂದ ಅಣ್ಣ ➤ ಆರೋಪಿ ಪರಾರಿ

error: Content is protected !!
Scroll to Top