ಪುತ್ತೂರು ಅರಣ್ಯ ಇಲಾಖೆಯ ಮಿಂಚಿನ ಕಾರ್ಯಾಚರಣೆ ➤ ಆನೆದಂತ ಸಹಿತ 6 ಮಂದಿ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 19. ಅರಣ್ಯ ಇಲಾಖೆಯ ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು ವಲಯದಲ್ಲಿ ಅರಣ್ಯಾಧಿಕಾರಿಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಅಂತರ್ ರಾಜ್ಯ ಕುಖ್ಯಾತ ದಂತಚೋರರನ್ನು ಬಂಧಿಸಿದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ತಿರುಗುವ ಜಂಕ್ಷನ್ ಬಳಿ ನಡೆದಿದೆ.

 

ಬಂಧಿತ ಆರೋಪಿಗಳನ್ನು ಶಶಿಕುಮಾರ್, ಸತೀಶ್, ವಿಜ್ಞೇಶ್, ವಿನಿತ್, ಸಂಪತ್‌ ಕುಮಾರ್ ಹಾಗೂ ರತೀಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ಆನೆ ದಂತ ಮತ್ತು ಒಂದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ತಮಿಳುನಾಡು ಮತ್ತು ಕೇರಳ ಮೂಲದವರಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಿದೆ.‌

Also Read  'ಕಡಬದಲ್ಲಿ ಕೊರೋನಾ' ಬಗ್ಗೆ ವೈದ್ಯಾಧಿಕಾರಿ ಹೇಳಿದ್ದೇನು ಗೊತ್ತೇ..?

error: Content is protected !!
Scroll to Top