ಬೆಳ್ತಂಗಡಿ: ಮನೆಯ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 19. ಉಜಿರೆ ಪಿಯು ಕಾಲೇಜು ಹಿಂಭಾಗದಲ್ಲಿರುವ ಶಂಕರ ಶೆಟ್ಟಿ ಎಂಬವರ ಮನೆಯ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ವರದಿಯಾಗಿದೆ.

 

ಶ್ರೀ ದುರ್ಗಾ ನಿಲಯ ಎಂದು ಹೆಸರಿರುವ ಮನೆಯ ಬಾವಿಯೊಂದರಲ್ಲಿ ಮೃತದೇಹ ಪತ್ತೆಯಾಗಿದ್ದು, ಆದರೆ ಈ ಮನೆಯವರು ಮೈಸೂರಿನಲ್ಲಿ ವಾಸವಾಗಿದ್ದ ಹಿನ್ನೆಲೆ ಮನೆಗೆ ಬೀಗ ಹಾಕಲಾಗಿತ್ತು. ವಾರದ ಹಿಂದೆ ಮನೆಯವರು ಬಂದಾಗ ಬಾವಿಯನ್ನು ಗಮನಿಸಿದ್ದು, ಆದರೆ ಇವರು ಮೃತದೇಹದ ತಲೆಯನ್ನು ತೆಂಗಿನಕಾಯಿ ಎಂದುಕೊಂಡು ವಾಪಾಸ್ ಆಗಿದ್ದರು ಎನ್ನಲಾಗಿದೆ. ಆದರೆ ಯಾವುದೋ ಮೃತದೇಹದ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಊರಿನವರು, ಬಾವಿಯಲ್ಲಿ ಇಣುಕಿ ನೋಡಿದಾಗ ಮೃತ ದೇಹವಿರುವುದು ಬೆಳಕಿಗೆ ಬಂದಿದೆ. ಈ ಕುರಿತು ತಕ್ಷಣವೇ ಮನೆ ಮಾಲೀಕ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ನಂತರ ಮುಳುಗು ತಜ್ಞರನ್ನು ಕರೆಸಿ ಮೃತದೇಹ ಮೇಲಕ್ಕೆತ್ತಲಾಗಿದೆ. ಮೃತದೇಹ ಗಂಡಸಿನದ್ದಾಗಿದ್ದು ಬಲ ಕೈಯಲ್ಲಿ ‘ಮಂಜುಳಾ’ ಎಂಬುವುದಾಗಿ ಟ್ಯಾಟು ಹಾಕಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕೃಷಿ ಪಂಡಿತ/ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

error: Content is protected !!
Scroll to Top