ಪಿಯುಸಿ ರಿಸಲ್ಟ್ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 18. ಪಿಯುಸಿ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಈವರಗೆ ಒಟ್ಟು ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ಪ್ರಣಮ್ ಈಶ್ವರ್ ನಾಯ್ಕ(18), ಗದಗ ತಾಲೂಕಿನ ಹರ್ತಿ ಗ್ರಾಮದ ಪವಿತ್ರ ಲಿಂಗದಾಳ(18), ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಎಂ.ಜೆ.ಸ್ಪಂದನಾ(17) ಮತ್ತು ಕೊಡಗು ಜಿಲ್ಲೆಯ ಬಸವನಹಳ್ಳಿಯ ಸಂಧ್ಯಾ(18) ಎಂದು ಗುರುತಿಸಲಾಗಿದೆ. ಕುಮಟಾ ತಾಲೂಕಿನ ಎ.ವಿ ಬಾಳಿಗಾ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪ್ರಣಮ್ ಈಶ್ವರ್ ನಾಯ್ಕ 4 ವಿಷಯಗಳಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆ ಜಿಗುಪ್ಸೆಗೊಂಡು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಗದಗ ನಗರದ ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪವಿತ್ರ ಲಿಂಗದಾಳ, ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯದ ಸ್ಯಾಂಥೋಂ ಕಾಲೇಜಿನಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಶ್ರೀರಂಗಪಟ್ಟಣ ತಾಲೂಕಿನ ಸ್ಪಂದನಾ ಮೂರು ವಿಷಯದಲ್ಲಿ ಅನುತೀರ್ಣಗೊಂಡು ನೇಣಿಗೆ ಶರಣಾಗಿದ್ದಾರೆ. ನಿರೀಕ್ಷಿತ ಅಂಕ ಬರದಿದ್ದಕ್ಕೆ ಬೇಸರಗೊಂಡ ಸಂದ್ಯಾ ಕೊಡಗಿನಲ್ಲಿ ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Also Read  ಬೆಳ್ತಂಗಡಿ: ಗಾಂಜಾ ಸೇವನೆ ➤ ಆರೋಪಿ ವಶಕ್ಕೆ

error: Content is protected !!
Scroll to Top