ಪುತ್ತೂರು: ಶೈಲಜಾ ಅಮರನಾಥ್ ಮನೆಗೆ ಯುವಕರ ತಂಡ ದಾಳಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 18. ಕಾಂಗ್ರೆಸ್‌ ಐಟಿ ಸೆಲ್‌ ಕಾಯದರ್ಶಿ ನ್ಯಾಯವಾದಿ ಶೈಲಜಾ ಅಮರನಾಥರವರ ಬಪ್ಪಳಿಗೆಯ ಮನೆಗೆ ಯುವಕರ ತಂಡವೊಂದು ದಾಳಿ ನಡೆಸಿದ ಘಟನೆ ಶನಿವಾರದಂದು ಸಂಜೆ ನಡೆದಿದೆ.

ಶೈಲಜಾ ರವರು ಸಾಮಾಜಿಕ ಜಾಲತಾಣವಾದ ಕ್ಲಬ್‌ ಹೌಸ್‌ ನಲ್ಲಿ ನಡೆದ ಚರ್ಚಾಕೂಟವೊಂದರಲ್ಲಿ ಶ್ರೀರಾಮಚಂದ್ರ, ಸೀತಾಮಾತೆ ಮತ್ತು ಹನುಮಂತ ದೇವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್‌, ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಪ್ರಮುಖರು ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಇದರ ಬೆನ್ನಲ್ಲೇ ಶೈಲಜಾ ಅಮರನಾಥರ ಮನೆಗೆ ಬಂದ ಯುವಕರ ತಂಡವೊಂದು ದಾಳಿ ನಡೆಸಿ ಗಾಜುಗಳನ್ನು ಪುಡಿಗೈದು, ಕಪ್ಪು ಮಸಿ ಎರಚಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಈ ಕುರಿತು ಶೈಲಜಾ ಅಮರನಾಥರವರು ನೀಡಿದ ದೂರಿನಂತೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

Also Read  ಸ್ವಚ್ಛ ಮೇವ ಜಯತೆ ಸಮಾರೋಪ, ಪಾಲಕರ ಸಮಾವೇಶ

error: Content is protected !!
Scroll to Top