ದ್ವಿಚಕ್ರ ವಾಹನ- ಟಿಪ್ಪರ್ ನಡುವೆ ಢಿಕ್ಕಿ ➤ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 18. ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಡ್ರೀಯ ಹೆದ್ದಾರಿ ಪೆರ್ನೆಯಲ್ಲಿ ಶನಿವಾರದಂದು ನಡೆದಿದೆ.

ಮೃತ ಮಹಿಳೆಯನ್ನು ಪುತ್ತೂರು ಹಾರಾಡಿಯಲ್ಲಿನ ಪ್ರಜ್ವಲ್ ಸ್ಟೋರ್ಸ್ ನ ಮಾಲಕ ನೆಕ್ಕಿಲಾಡಿ ನಿವಾಸಿ ಬಾಲಕೃಷ್ಣ ಭಟ್ ಅವರ ಪತ್ನಿ ಪೂರ್ಣಿಮಾ(47) ಎಂದು ಗುರುತಿಸಲಾಗಿದೆ. ದಂಪತಿಗಳು ಇಂದು ಬೆಳಗ್ಗೆ ಪೆರ್ನೆಯಲ್ಲಿರುವ ತಮ್ಮ ತೋಟಕ್ಕೆ ತೆರಳಿ, ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ ಟಿಪ್ಪರ್ ವೊಂದು ಟಿಪ್ಪರ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಬಾಲಕೃಷ್ಣ ಭಟ್ ಅವರ ಪತ್ನಿ ಪೂರ್ಣಿಮ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಕಡಬ-ಪಂಜ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯ ದುರವಸ್ಥೆ ► ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರಿಂದ ಎಚ್ಚರಿಕೆ

error: Content is protected !!
Scroll to Top