ವಿಟ್ಲ: ಅಕ್ರಮ ಬಾಕ್ಸೈಟ್ ಮಣ್ಣು ಸಾಗಾಟ ➤ 7 ಲಾರಿ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 15. ಕೇರಳದಿಂದ ಅಕ್ರಮವಾಗಿ ಬಾಕ್ಸೈಟ್ ಮಣ್ಣು ತುಂಬಿಸಿ ತರುತ್ತಿದ್ದ ಸುಮಾರು ಎಂಟು ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

 


ವಿಟ್ಲದ ಕನ್ಯಾನ ಸಮೀಪ ಮಣ್ಣು ಮಾಫಿಯಾ ನಡೆಯುತ್ತಿದ್ದು, ಈ ಕುರಿತು ಸ್ಥಳೀಯರು ಹಲವು ಬಾರಿ ವಿರೋಧ ವ್ಯಕ್ತಪಡಿಸಿದ್ದರೂ ಕೂಡಾ ಹಣದ ಹೊಳೆ ಸುರಿಸಿ, ಬಾಯಿ ಮುಚ್ಚಿಸಲಾಗಿತ್ತು. ಇದೀಗ ವಿಟ್ಲ ಮೂಲಕ ಅಕ್ರಮವಾಗಿ ಬಳ್ಳಾರಿ, ಸಂಡೂರಿಗೆ ಬಾಕ್ಸೈಟ್ ಸಾಗಿಸುತ್ತಿದ್ದ ಏಳು ಸರಕು ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

Also Read  ಮಂಗಳೂರು |ಮಳೆಗೆ ನಲುಗಿದ ಕರಾವಳಿ ಭಾಗ

error: Content is protected !!
Scroll to Top