ದ್ವೇಷ ಭಾಷಣಗಳ ವಿರುದ್ಧ ದಿಲ್ಲಿ ಪೊಲೀಸರ ಎಫ್.ಐ.ಆರ್ ಕುಟಿಲತನದ್ದು ಮತ್ತು ಕ್ರಿಮಿನಲ್ ಗಳಿಗೆ ನೆರವು ನೀಡುವ ಉದ್ದೇಶ ಹೊಂದಿದೆ ➤ ಪಾಪ್ಯುಲರ್ ಫ್ರಂಟ್

(ನ್ಯೂಸ್ ಕಡಬ) newskadaba.com ಜೂ. 15. ದ್ವೇಷ ಭಾಷಣಗಳ ವಿರುದ್ಧ ದಿಲ್ಲಿ ಪೊಲೀಸರು ದಾಖಲಿಸಿರುವ ಎಫ್.ಐ.ಆರ್.ಗಳು ಕುಟಿಲತನದ್ದು ಮತ್ತು ಅವು ಮಧ್ಯಮ ಮಾರ್ಗದ ಮೂಲಕ ಕ್ರಿಮಿನಲ್ ಗಳಿಗೆ ನೆರವು ನೀಡುವ ಉದ್ದೇಶವನ್ನಷ್ಟೇ ಹೊಂದಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಹೇಳಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರವಾದಿ ಮುಹಮ್ಮದ್ (ಸ) ಕುರಿತಾದ ಅವಹೇಳನಕಾರಿ ಹೇಳಿಕೆ ನೀಡಿ ಒಂದು ವಾರ ಕಳೆದ ಹೊರತಾಗಿಯೂ, ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಇನ್ನೂ ಮುಕ್ತವಾಗಿರುವುದು ಪೊಲೀಸರು ಮತ್ತು ಸರಕಾರದ ವೈಫಲ್ಯವಾಗಿದೆ. ಆಡಳಿತಾರೂಢ ಬಿಜೆಪಿಯು ಅವರ ವಿರುದ್ಧ ಯಾವುದೇ ಅರ್ಥಪೂರ್ಣ ಕಾನೂನು ಕ್ರಮ ಕೈಗೊಳ್ಳುವ ಉದ್ದೇಶ ಹೊಂದಿಲ್ಲ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಪಕ್ಷವು ಪ್ರಾರಂಭದಲ್ಲಿ ಈ ಇಬ್ಬರೂ ವಕ್ತಾರರ ಸಮರ್ಥನೆಗಿಳಿದಿತ್ತು. ಆದರೆ ಅವರ ಈ ಕೃತ್ಯವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಗಳನ್ನು ಬೀರಿದಾಗಲಷ್ಟೇ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.

Also Read  ಕಡಬ: ಸೈಂಟ್ ಜೋಕಿಮ್ಸ್ ಚರ್ಚ್ ಬಿಲ್ಡಿಂಗ್ ನಲ್ಲಿ 'ಬರ್ಲಿನ್' ಪುರುಷರ ಉಡುಪುಗಳ ಮಳಿಗೆ ಶುಭಾರಂಭ

 

ಇದೀಗ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಜೊತೆಜೊತೆಗೆ ಪೀಸ್ ಪಾರ್ಟಿ ನಾಯಕ ಶದಾಬ್ ಚೌಹಾನ್, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮತ್ತು ಪತ್ರಕರ್ತೆ ಸಬಾ ನಖ್ವಿ ಸೇರಿದಂತೆ ಇತರ 30ಕ್ಕೂ ಹೆಚ್ಚು ಮಂದಿ ವಿರುದ್ಧ ದಿಲ್ಲಿ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ ಎಂಬ ವಿಚಾರ ಇದೀಗ ಮಾಧ್ಯಮ ವರದಿಗಳಿಂದ ತಿಳಿದು ಬರುತ್ತಿದೆ. ಪ್ರಸಕ್ತ ವಿಚಾರಗಳೆಲ್ಲವೂ ಇಸ್ಲಾಮಿನ ಪ್ರವಾದಿಯನ್ನು ಅವಹೇಳನ ಮಾಡಿದ ಬಿಜೆಪಿ ನಾಯಕರಿಗೆ ಸಂಬಂಧಿಸಿದ್ದಾಗಿದ್ದರೂ, ನೈಜ ಸಮಸ್ಯೆಯನ್ನು ಪರಿಹರಿಸುವ ಬದಲು ಈ ಎಫ್.ಐ.ಆರ್ ಗಳಲ್ಲಿ ದ್ವೇಷ ಭಾಷಣ ಮಾಡಿದವರು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದವರನ್ನು ಸಮಾನವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಈ ಎಫ್.ಐ.ಆರ್ ನ ಹಿಂದೆ ದ್ವೇಷ ಭಾಷಣಕಾರರನ್ನು ನಿಯಂತ್ರಿಸುವ ಬದಲು, ಈ ವಿಚಾರವನ್ನು ಮುಚ್ಚಿ ಹಾಕುವ ಮತ್ತು ಅದರ ವಿರುದ್ಧ ಧ್ವನಿ ಎತ್ತುವವರನ್ನು ತಡೆಯುವ ಉದ್ದೇಶವಿದೆ.

Also Read  ಬೆಳ್ತಂಗಡಿ : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ      ➤ ಗರ್ಭಪಾತ ಮಾಡಿಸಿದ ಆರೋಪದಡಿ ನಾಲ್ವರ ವಿರುದ್ದ ದೂರು ದಾಖಲು…!!!            

 

ಈ ರೀತಿಯ ಮಧ್ಯಮ ಕ್ರಮಗಳು ಪರಿಸ್ಥಿತಿಯನ್ನು ಬಿಗಡಾಯಿಸಲಿದೆ ಎಂದು ಅಧಿಕಾರಗಳನ್ನು ಪಾಪ್ಯುಲರ್ ಫ್ರಂಟ್ ಎಚ್ಚರಿಸುತ್ತದೆ. ನಮ್ಮ ದೇಶ ಮತ್ತು ಜಗತ್ತಿನಾದ್ಯಂತ ಕೋಟ್ಯಂತರ ಮುಸ್ಲಿಮರನ್ನು ಅವಮಾನಿಸಿದ ಕ್ರಿಮಿನಲ್ ಗಳ ವಿರುದ್ಧ ಪರಿಣಾಮಕಾರಿ ಅಗತ್ಯ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆಗಳು ಮುಂದುವರಿಯಲಿವೆ.

 

error: Content is protected !!
Scroll to Top