ಪುತ್ತೂರು: ಮನೆಗೆ ನುಗ್ಗಿದ ಕಳ್ಳರು..! ➤ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 14. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಪಲ್ಸರ್ ಬೈಕ್‌ ನ್ನು ಕಳವು ನಡೆಸಿದ ಘಟನೆ ಸಂಪ್ಯದಲ್ಲಿ ನಡೆದಿದೆ.

 

ಸಂಪ್ಯ ಅದ್ರಾಮ.ಎಸ್ ಮತ್ತು ಅವರ ಪತ್ನಿ ಮೆಹಂದಿ ಕಾರ್ಯಕ್ರಮಕ್ಕೆಂದು ಬೆಳಗ್ಗೆ ತೆರಳಿ ರಾತ್ರಿ ಮನೆಗೆ ಹಿಂತಿರುಗಿದ್ದು, ಇದರ ನಡುವೆ ಕಳ್ಳತನವಾಗಿದೆ ಎಂದೆನ್ನಲಾಗಿದೆ. ಮನೆಯ ಹಿಂಬಾಗಿಲ ಮೂಲಕ ಒಳಪ್ರವೇಶಿಸಿದ ಕಳ್ಳರು, ಮನೆಯ ಬೆಡ್‌ರೂಮ್‌ನ ಹಾಸಿಗೆಯೊಳಗಿದ್ದ ಕೀ ಉಪಯೋಗಿಸಿ ಕಪಾಟನ್ನು ತೆರೆದು ಚಿನ್ನದ ಬಳೆಗಳು, ನೆಕ್ಲೆಸ್, ಬೆಂಡೋಲೆ, ವಜ್ರದ ಉಂಗುರ ಸೇರಿದಂತೆ ಸುಮಾರು 6,74,600 ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಲ್ಲದೇ, ಇದರ ಜೊತೆಗೆ ಮನೆಯ ಅಂಗಳದಲ್ಲಿದ್ದ ಪಲ್ಸರ್ ಬೈಕ್ ನ್ನು ಕೂಡಾ ಕಳವು ಮಾಡಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read  ಸಾಕುನಾಯಿ ದಾಳಿ ಮಾಡಿದರೆ ಮಾಲೀಕರಿಗೆ 6 ವರ್ಷ ಜೈಲು ಶಿಕ್ಷೆ - ಪೊಲೀಸ್ ಇಲಾಖೆ ಎಚ್ಚರಿಕೆ

 

error: Content is protected !!
Scroll to Top