ಎಣ್ಮೂರು: ಸಚಿವ ಅಂಗಾರರಿಂದ ಸೇತುವೆ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಎಣ್ಮೂರು, ಜೂ. 13. ಎಣ್ಮೂರು ಗ್ರಾಮದ ಕಲ್ಲೇರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನೂತನ ಸೇತುವೆಯನ್ನು ಸಚಿವ ಎಸ್. ಅಂಗಾರರವರು ಇಂದು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ನಡುಬೈಲು, ಎಡಮಂಗಲ ಗ್ರಾ.ಪಂ. ಉಪಾಧ್ಯಕ್ಷೆ ರೇವತಿ ಎಣ್ಮೂರು, ಸದಸ್ಯರಾದ ದಿವ್ಯಾ ಯೋಗಾನಂದ, ಸವಿತಾ ಕಲ್ಲೇರಿ, ಪ್ರಮುಖರಾದ ಲಕ್ಷ್ಮಿನಾರಾಯಣ ನಡ್ಕ, ಯೋಗಾನಂದ ಉಳ್ಳಲಾಡಿ , ಭಾಗೀರಥಿ ಮುರುಳ್ಯ, ವಸಂತ ರೈ ಕಲ್ಲೇರಿ, ಮೋಹನದಾಸ್ ರೈ ಬಲ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.

Also Read  ಕುಂತೂರು: ಬಿ.ಇಡಿ. ಪ್ರಶಿಕ್ಷಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟ

error: Content is protected !!
Scroll to Top