ಕಾರ್ಮಿಕರ ಪಿಂಚಣಿಗಾಗಿ ನೋಂದಾವಣೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 11. ಪ್ರಧಾನಮಂತ್ರಿ ಶ್ರಮಯೋಗಿ ಮನ್-ಧನ್ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022ರ ಜುಲೈ 26ರ ವರೆಗೆ ನೋಂದಾವಣಿ ಹಮ್ಮಿಕೊಳ್ಳಲಾಗಿದೆ. ಕಾರ್ಮಿಕ ಇಲಾಖೆ ಹಾಗೂ ಸಿಎಸ್‍ಸಿ ಇ-ಗವರ್ವೆಸ್ಸಿ ಸರ್ವಿಸಸ್ ಇಂಡಿಯಾದ ಸಹಯೋಗದಲ್ಲಿ ನಡೆಯುತ್ತಿರುವ ಈ ನೋಂದಾವಣಿಯಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು, ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು, 18 ರಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಈ ಯೋಜನೆಯ ಲಾಭ ಪಡೆಯಬಹುದು.

ವಯಸ್ಸಿಗೆ ಅನುಗುಣವಾಗಿ ಮಾಸಿಕ ಕನಿಷ್ಠ 55 ರೂ.ಗಳಿಂದ 200 ರೂ.ಗಳವರೆಗೆ ವಂತಿಗೆ ಪಾವತಿಸಬೇಕು. ಕೇಂದ್ರ ಸರ್ಕಾರದ ವತಿಯಿಂದ ಅಷ್ಟೇ ವಂತಿಗೆ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತದೆ. ಈ ಕ್ರೋಢೀಕೃತ ಮೊತ್ತದ ಆಧಾರದಲ್ಲಿ ವಂತಿಗೆದಾರರಿಗೆ 60 ವರ್ಷ ಪೂರ್ಣಗೊಂಡ ನಂತರ ಮಾಸಿಕ ಕನಿಷ್ಠ 3 ಸಾವಿರ ರೂ.ಗಳ ಪಿಂಚಣಿ ಸೌಲಭ್ಯ ಪಡೆಯಬಹುದು. ಆಧಾರ್ ಕಾರ್ಡ್, ಫೋಟೋ, ಬ್ಯಾಂಕ್ ಪಾಸ್ ಬುಕ್ ಹಾಗೂ ಮೊದಲ ತಿಂಗಳ ವಂತಿಗೆ ಪಾವತಿಸಿದ ದಾಖಲೆಗಳೊಂದಿಗೆ ಸಮೀಪದ ಸಾಮಾನ್ಯ ಕೇಂದ್ರಗಳಲ್ಲಿ ಪಿಎಂ-ಎಸ್‍ವೈಎಂ ಯೋಜನೆಯಡಿ ನೋಂದಣಿಯಾಗಿ ಕಾರ್ಡ್ ಪಡೆಯಬಹುದು. ಅಲ್ಲದೇ ಇ-ಶ್ರಮ್ ಕಾರ್ಡ್ ಅನ್ನು ಉಚಿತವಾಗಿ ನೋಂದಣಿ ಮಾಡಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಕಾರ್ಮಿಕ ಅಧಿಕಾರಿ ಕಚೇರಿ, ಕಾರ್ಮಿಕ ನಿರೀಕ್ಷಕರ ಕಚೇರಿ ಹಾಗೂ ಸಿಎಸ್‍ಸಿ ಇ-ಗವರ್ನೆಸ್ಸಿ ಸರ್ವಿಸಸ್‍ನ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು. ದೂರವಾಣಿ: 0824-2433132, 0824-2435343 ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉಪ ವಿಭಾಗ-1ರ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಸೌಹಾರ್ದ ವಾತಾವರಣ ನಿರ್ಮಿಸದ ತಂದೆಗೆ ಮಗಳನ್ನು ತನ್ನ ಸುಪರ್ದಿಗೆ ಕೇಳುವ ಹಕ್ಕಿಲ್ಲ.!➤ಹೈಕೋರ್ಟ್ ಆದೇಶ

 

error: Content is protected !!
Scroll to Top