80 ಅಡಿ ಆಳದ ಬೋರ್ ವೆಲ್ ಗೆ ಬಿದ್ದ ಬಾಲಕ..!! ➤ ಮುಂದುವರಿದ ರಕ್ಷಣಾ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಜಾಂಜ್ ಗಿರ್, ಜೂ. 11. ಹನ್ನೊಂದು ವರ್ಷದ ಬಾಲಕನೋರ್ವ 80 ಅಡಿ ಆಳದ ಬೋರ್ ವೆಲ್ ಗೆ ಬಿದ್ದ ಘಟನೆ ಘತ್ತೀಸ್ ಗಡದ ಜಂಜ್ ಗಿರ್ ಚಂಪಾ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.

ಬಾಲಕನನ್ನು ರಾಹುಲ್ ಸಾಹು ಎಂದು ಗುರುತಿಸಲಾಗಿದೆ. ಈತ ಶುಕ್ರವಾರದಂದು ಮಧ್ಯಾಹ್ನದ ವೇಳೆ ಆಟವಾಡುತ್ತಿದ್ದ ಸಂದರ್ಭ ತನ್ನ ಮನೆಯ ಹಿತ್ತಲಿನಲ್ಲಿರುವ ಬೋರ್ವೆಲ್ ಗೆ ಬಿದ್ದಿದ್ದಾನೆ. ತುಂಬಾ ಹೊತ್ತಾದರೂ ಬಾಲಕ ಮನೆಗೆ ಬಾರದೇ ಇರುವುದನ್ನು ಮನಗಂಡ ಮನೆಯವರು ಹುಡುಕಾಡಲು ಆರಂಭಿಸಿದ್ದು, ಈ ಸಂದರ್ಭ ಬೋರ್ ವೆಲ್ ನ ಒಳಗಿನಿಂದ ಅಳುವ ಸದ್ದು ಕೇಳಿಬಂದಿದೆ. ಕೂಡಲೇ ಕುಟುಂಬಿಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಸಂಜೆಯ ವೇಳೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಬೋರ್ ವೆಲ್ ನ ಒಳಗೆ ಆಮ್ಲಜನಕ ವ್ಯವಸ್ಥೆ ಮಾಡಲಾಗಿದೆ ಅಲ್ಲದೇ ಘಟನಾ ಸ್ಥಳದಲ್ಲಿ ವೈದ್ಯರನ್ನೂ ನೇಮಿಸಲಾಗಿದೆ.

Also Read  ಸುಳ್ಯ: ಅಡಿಕೆ ಕದ್ದ ಬಾಲಕನಿಗೆ ಮಾರಣಾಂತಿಕ ಹಲ್ಲೆ ➤ 10 ಮಂದಿಯ ವಿರುದ್ದ ಎಫ್ಐಆರ್ ದಾಖಲು

error: Content is protected !!
Scroll to Top