ನೆಲ್ಯಾಡಿ: ಕಂದಕಕ್ಕೆ ಉರುಳಿದ ಸಿಮೆಂಟ್ ಸಾಗಾಟದ ಲಾರಿ ➤ ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ. 11. ಎರಡು ಬಸ್ಸುಗಳ ನಡುವಿನ ಓವರ್ ಟೇಕ್ ತಪ್ಪಿಸಲು ಹೋದ ಸಿಮೆಂಟ್ ಲಾರಿಯೊಂದು ಕಂದಕಕ್ಕೆ ಉರುಳಿಬಿದ್ದ ಘಟನೆ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ.


ದೊಡ್ಡಬಳ್ಳಾಪುರದಿಂದ ಕಾರ್ಕಳಕ್ಕೆ ಸಿಮೆಂಟ್ ಹೊತ್ತುಕೊಂಡು ಹೋಗುತ್ತಿದ್ದ ಲಾರಿಯು, ಬಸ್ ಗಳೆರಡು ಓವರ್ ಟೇಕ್ ಮಾಡಿಕೊಂಡು ಬಂದಿದ್ದು, ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಪಕ್ಕದ ಕಂದಕಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

Also Read  16 ವರ್ಷಗಳ ಹಿಂದೆ ಮನೆಯಿಂದ ಚಿನ್ನಾಭರಣ ಕದ್ದೊಯ್ದ ಪ್ರಕರಣ ➤ ಆರೋಪಿಗೆ 9 ವರ್ಷ ಜೈಲು ಶಿಕ್ಷೆ

error: Content is protected !!
Scroll to Top