ಕಡಬ: ಯುವತಿಯ ಅತ್ಯಾಚಾರ ಆರೋಪ ➤ ಆರೋಪಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ) newskadaba.com ಕಡಬ, ಜೂ. 10. ಕಾಣಿಯೂರಿನ ಯುವತಿಯೋರ್ವಳನ್ನು ಗುಡ್ಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಆರೋಪಿಗೆ ನ್ಯಾಯಾಲಯವು ಜಾಮೀನು ನೀಡಿದೆ.


2022ರ ಫೆಬ್ರವರಿ 17 ರಂದು ಕಾಣಿಯೂರಿನ ಬಂಡಾಜೆ ಎಂಬಲ್ಲಿ ಯುವತಿಯೋರ್ವಳನ್ನು ಅತ್ಯಾಚಾರ ಮಾಡಿದ ಆರೋಪದಡಿ ಚಂದ್ರಶೇಖರ ಎಂಬಾತನನ್ನು ಬೆಳ್ಳಾರೆ ಪೊಲೀಸರು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಇದೀಗ ತನಿಖಾಧಿಕಾರಿಯು ಆರೋಪಿ ಜೈಲಿನಲ್ಲಿರುವುದರಿಂದ 90 ದಿನಗಳಲ್ಲಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸದ ಹಿನ್ನೆಲೆ ಆರೋಪಿ ಪರವಾಗಿ ವಿಶೇಷ ಅರ್ಜಿಯನ್ನು ಸುಳ್ಯ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ಬಳಿಕ ಇದರ ಚಾರ್ಜ್ ನ್ನು ಸುಳ್ಯ ನ್ಯಾಯಲಯವು ಬೆಳ್ತಂಗಡಿ ನ್ಯಾಯಾಲಯಕ್ಕೆ ನೀಡಿದುದರಿಂದ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಕರಣದಲ್ಲಿ ದೋಷರೋಪಣ ಪಟ್ಟಿಯನ್ನು ಕ್ಲಪ್ತ ಸಮಯದಲ್ಲಿ ತನಿಖಾಧಿಕಾರಿ ಸಲ್ಲಿಸಿಲ್ಲ ಎಂಬುದನ್ನು ಮನಗಂಡು ಆರೋಪಿಯ ಮೂಲಭೂತ ಹಕ್ಕನ್ನು ಕಡೆಗಣಿಸುವಂತಿಲ್ಲ ಎಂಬ ಹೇಳಿಕೆ ನೀಡಿ ಆರೋಪಿಗೆ ಎರಡು ಜಾಮೀನುಗಳನ್ನು ನೀಡುವ ಶರ್ತದ ಮೇರೆಗೆ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಆರೋಪಿಯ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಎಂ.ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ, ಶ್ಯಾಮ್ ಪ್ರಸಾದ್ ಹಾಗೂ ಮನೋಜ್ ವಕಾಲತ್ತು ವಹಿಸಿದ್ದರು.

Also Read  ಬಿ.ಸಿ.ರೋಡ್ ಜಂಕ್ಷನ್ ಬಳಿ ಅಪಾಯಕಾರಿ ಹೊಂಡ ► ಅಪಾಯದಿಂದ ಪಾರಾದ ಅಜ್ಜಿ-ಮೊಮ್ಮಗ

error: Content is protected !!
Scroll to Top