ಯಡಿಯೂರಪ್ಪ, ಶೋಭಾ, ಸದಾನಂದ ಗೌಡರಿಂದ ಹಿಂದೂ ಕಾರ್ಯಕರ್ತರ ಕೊಲೆ ► ಸುಳ್ಯದಲ್ಲಿ ಹೇಳಿಕೆ ನೀಡಿದ ಬಿಜೆಪಿ ಸಂಸದ ಶ್ರೀರಾಮುಲು

(ನ್ಯೂಸ್ ಕಡಬ) newskadaba.com ಸುಳ್ಯ, ನ.11. ಕರ್ನಾಟಕದಲ್ಲಿ ಆರ್‍ಎಸ್‍ಎಸ್ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಕೆಲಸವನ್ನು ಶೋಭಾ ಕರಂದ್ಲಾಜೆ, ಬಿ.ಎಸ್. ಯಡಿಯೂರಪ್ಪ ಮತ್ತು ಸದಾನಂದ ಗೌಡ ಅವರು ಮಾಡಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಎಡವಟ್ಟು ಮಾಡಿಕೊಂಡಿದ್ದಾರೆ.

ಅವರು ಶನಿವಾರದಂದು ಸುಳ್ಯದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿ, ಮಾತಿನ ಭರದಲ್ಲಿ ಕರಾವಳಿಯ ಕೊಲೆ ರಾಜಕೀಯದ ಬಗ್ಗೆ ಉಲ್ಲೇಖಿಸಿ ಈ ರೀತಿಯಾಗಿ ಹೇಳಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಅವರು ಕರ್ನಾಟಕದಲ್ಲಿ ಜಾತಿ ವಿಭಜನೆ ಮಾಡುವ ಹಾಗೂ ಆರ್‍ಎಸ್‍ಎಸ್, ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.

Also Read  ಭಾರತೀಯ ಅಂಚೆ ಇಲಾಖೆ ➤ಮಕ್ಕಳ ಹಕ್ಕುಗಳು- ‘ಅಂಚೆ ಚೀಟಿ ಡಿಸೈನ್ ಸ್ಪರ್ಧೆ’

ಸಂಸದ ಶ್ರೀ ರಾಮುಲು ಅವರ ಮಾತನ್ನು ಕೇಳಿ ವೇದಿಕೆ ಮೇಲಿದ್ದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸದಾನಂದ ಗೌಡ ಕ್ಷಣ ಕಾಲ ದಂಗಾದರು. ಶ್ರೀರಾಮುಲು ಅವರ ಭಾಷಣದ ತುಣುಕು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

error: Content is protected !!
Scroll to Top