(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 09. ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಯುವಕನೋರ್ವ ಹೊಟ್ಟೆಗೆ ಬಟ್ಟೆ ಸುತ್ತಿಕೊಂಡು ಹೈಡ್ರಾಮಾ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ರಸ್ತೆ ಬದಿ ಬಿದ್ದಿದ್ದ ಯುವಕ ಕುಡಿದ ಮತ್ತಿನಲ್ಲಿದ್ದರೂ, ಆತ ಹೊಟ್ಟೆಗೆ ಸುತ್ತಿಕೊಂಡಿದ್ದ ಬಟ್ಟೆಯಲ್ಲಿ ರಕ್ತ ಮೆತ್ತಿದ ಹಾಗೆ ಕಂಡಿದ್ದರಿಂದ ಆತನಿಗೆ ಏನೋ ಗಾಯವಾಗಿರಬಹುದು ಎಂದು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪರೀಕ್ಷಿಸಿದ ವೈದ್ಯರು ಬಟ್ಟೆ ತೆಗೆದು ನೋಡಿದಾಗ ಗಾಯದ ಗುರುತು ಏನೂ ಕಾಣಿಸಲಿಲ್ಲ. ಯುವಕ ಮದ್ಯದ ಅಮಲಿನಿಂದ ಎಚ್ಚೆತ್ತಾಗ ತನಗೇನೂ ಆಗಿಲ್ಲ, ಪೈಂಟ್ ಕೆಲಸ ಮಾಡುತ್ತಿರುವ ತಾನು ಕೆಂಪು ಪೈಂಟ್ ಮೆತ್ತಿದ್ದ ಬಳಿ ಬಟ್ಟೆಯನ್ನೇ ಹೊಟ್ಟೆಗೆ ಸುತ್ತಿಕೊಂಡಿದ್ದಾಗಿ ಹೇಳಿದ್ದಾನೆ.
Also Read ಮಂಗಳೂರು ಏರ್ಪೋರ್ಟ್ ಗೆ ಬಂದಿಳಿದ ಕೇರಳದ ಪ್ರಯಾಣಿಕನಲ್ಲಿ ಮಂಕಿಫಾಕ್ಸ್ ಪತ್ತೆ ➤ 35 ಮಂದಿಗೆ ಐಸೋಲೇಷನ್..!!