ಬಂಟ್ವಾಳ: ಕಾರು ಢಿಕ್ಕಿ ➤ ಚಾಲಕ ಮೃತ್ಯು..!!



(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 08. ರಿಕ್ಷಾ ಟೆಂಪೋವೊಂದರಲ್ಲಿ ಸಿಮೆಂಟ್ ಶೀಟ್ ಲೋಡ್ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ರಿಕ್ಷಾ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ.







ಮೃತ ವ್ಯಕ್ತಿಯನ್ನು ನೌಶಾದ್ ಸುರಿಬೈಲು (28) ಎಂದು ಗುರುತಿಸಲಾಗಿದೆ. ಇವರು ಕಲ್ಲಡ್ಕ ಪೂರ್ಲಿಪ್ಪಾಡಿ ಕೆ.ಎನ್ ಬೇಕರಿ ಬಳಿ ರಸ್ತೆಯ ಬದಿಯಲ್ಲಿ ರಿಕ್ಷಾ ಟೆಂಪೋವನ್ನು ನಿಲ್ಲಿಸಿ ಸಿಮೆಂಟ್ ಶೀಟ್ ನ್ನು ಲೋಡು ಮಾಡುತ್ತಿದ್ದ ಸಂದರ್ಭ ಹಿಂಬದಿಯಿಂದ ಬಂದ ಕಾರೊಂದು ನೌಶಾದ್ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ನೌಶಾದ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೌಶಾದ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.






 

 

error: Content is protected !!
Scroll to Top