ಅಕ್ರಮ ಜಾನುವಾರು ಸಾಗಾಟ ➤ ವಾಹನ ಸಹಿತ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಕಕ್ಕೆಪದವು, ಜೂ. 07. ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ ಹಿಂಜಾವೇ ಕಾರ್ಯಕರ್ತರು ವಾಹನ ಸಹಿತ ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಘಟನೆ ಕಕ್ಕೆಪದವಿನ ಉಳಿ ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ರಫೀಕ್ ಎಂದು ಗುರುತಿಸಲಾಗಿದೆ. ಈತ ಉಳಿ ಎಂಬಲ್ಲಿಂದ ಪುತ್ತಿಗೆ ಕಡೆಗೆ ವಾಹನದಲ್ಲಿ ಅಕ್ರಮವಾಗಿ ದನ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತ ಪಡೆದ ಹಿಂಜಾವೇ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಪೊಲೀಸರು ದಾಳಿ ನಡೆಸಿ ದನ, ವಾಹನ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Also Read  ತೆರಿಗೆ ವಂಚಕರನ್ನು ಪತ್ತೆಹಚ್ಚಲು ಡಿಜಿ ಯಾತ್ರಾ ದತ್ತಾಂಶ ಬಳಕೆ

error: Content is protected !!
Scroll to Top