ಕಾರು ಅಪಘಾತದ ಗಾಯಾಳು ಬಾಲಕಿ ಮೃತ್ಯು ➤ ಮೃತರ ಸಂಖ್ಯೆ ಎರಡಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ.6. ಚಾಲಕನ ನಿಯಂತ್ರಣ ತಪ್ಪಿದ ಹ್ಯುಂಡೈ ಐ20 ಕಾರೊಂದು ಕಿರು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಐವರು ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಚೇರು ಎಂಬಲ್ಲಿ ಸೋಮವಾರ ಅಪರಾಹ್ನ ನಡೆದಿದೆ.

ಮೃತ ವ್ಯಕ್ತಿಗಳನ್ನು ಬೆಂಗಳೂರಿನ ರಾಮನಗರ ನಿವಾಸಿಗಳಾದ ನಾಗೇಶ್(32) ಹಾಗೂ ತೇಜಸ್ವಿನಿ(14) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಚಾಲಕ ರವಿ(30), ರಜನಿ(24), ರಂಜಿತ್ (24), ಅಚಿಂತ್ಯಾ(6) ಹಾಗೂ ಸಣ್ಣ ಮಗುವಿಗೆ ಗಾಯಗಳಾಗಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮನಗರದಿಂದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಯಾತ್ರೆ ಬಂದಿದ್ದ ಕುಟುಂಬವು ವಾಪಸ್ಸು ಊರಿಗೆ ಹಿಂತಿರುಗುವ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಅವರು ಪ್ರಯಾಣಿಸುತ್ತಿದ್ದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ನಾಗೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಬಾಲಕಿ ತೇಜಸ್ವಿನಿ ಪುತ್ತೂರಿಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಡಬ ಎಸ್ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಮುಡಾ ಕೇಸ್ ಪ್ರಕರಣ- ಆಗಸ್ಟ್ 31ಕ್ಕೆ ವಿಚಾರಣೆ ಮುಂದೂಡಿಕೆ

 

 

error: Content is protected !!
Scroll to Top