ಸುಳ್ಯ: ಗೋದಾಮು ಕಟ್ಟಡಕ್ಕೆ ಬೆಂಕಿ- ಕೃಷಿಕ ಸಜೀವ ದಹನ..!! ➤ ಆತ್ಮಹತ್ಯೆ ಶಂಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 06. ಗೋದಾಮು ಕಟ್ಟಡವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಕೃಷಿಕರೋರ್ವರು ಸಜೀವ ದಹನವಾದ ಘಟನೆ ತಾಲೂಕಿನ ಮರ್ಕಂಜ ಬಳಿಯ ನೆಲ್ಲೂರು ಕೆಮ್ರಾಜೆ ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಗ್ರಾಮದ ನೂಜಾಲಿ ನಿವಾಸಿ ಮಹಾಲಿಂಗೇಶ್ವರ ಭಟ್ ಎಂದು ಗುರುತಿಸಲಾಗಿದೆ. ಅಡಿಕೆ ಹಾಗೂ ಕೃಷಿ ಉತ್ಪನ್ನಗಳನ್ನು ದಾಸ್ತಾನಿರಿಸಲಾಗಿದ್ದ ಕಟ್ಟಡಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿರಬಹುದು ಎಂದೆನ್ನಲಾಗುತ್ತಿದ್ದು, ಕೃಷಿಕನ ಮೃತದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದೀಗ ಘಟನೆಯನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Also Read  LPG ಗ್ರಾಹಕರಿಗೆ ಶಾಕ್ ➤ ಲಾಕ್ ಡೌನ್ ಮಧ್ಯೆ ಸಿಲಿಂಡರ್ ದರ ಹೆಚ್ಚಳ

error: Content is protected !!
Scroll to Top