ಅಧಿಕಾರ ಇದ್ದಾಗ ಏನೂ ಮಾಡದವರು ಇದೀಗ ಯಾತ್ರೆ ಹೊರಟಿದ್ದಾರೆ ► ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.10. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಹಾಗೂ ತಾನು ವೈಯಕ್ತಿಕವಾಗಿ ರಾಜ್ಯದಲ್ಲಿ ಯಾವುದೇ ಯಾತ್ರೆಯನ್ನು ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದ ಜನತೆ ಅಧಿಕಾರ ಕೊಟ್ಟಾಗ ಏನೂ ಮಾಡದವರು ಇದೀಗ ಪರಿವರ್ತನೆ, ಕುಮಾರ ಪರ್ವ ಹೆಸರಿನಲ್ಲಿ ಯಾತ್ರೆ ಹೊರಟಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಹೊರಟಿರುವ ಯಾತ್ರೆಗಳನ್ನು ಲೇವಡಿ ಮಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೆ ಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಬೆಳಗಾವಿ ಚಲೋ ಕಾರ್ಯಕ್ರಮ ಹಾಸ್ಯಾಸ್ಪದ ಎಂದು ಟೀಕಿಸಿದ ಅವರು ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಸಾಲಮನ್ನಾ ಮಾಡುವಂತೆ ಒತ್ತಾಯಿಸಿರುವ ಬಿಜೆಪಿ ಮುಖಂಡರು ಕೇಂದ್ರ ಸರಕಾರದ ವಿರುದ್ಧ ಸಂಸತ್ತಿಗೆ ಮುತ್ತಿಗೆ ಹಾಕಬೇಕಾಗಿದ್ದು, ರೈತರ ಸಾಲಮನ್ನಾ ಬಗ್ಗೆ ಬಿಜೆಪಿ ಮುಖಂಡರು ಮಾತನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

Also Read  ಅಡಿಕೆ, ತೆಂಗು, ಕಾಳುಮೆಣಸು ಖರೀದಿ ಕೇಂದ್ರ 'ಹಿಂದುಸ್ಥಾನ್ ಸುಪಾರಿ ಟ್ರೇಡರ್ಸ್' ಕಡಬದಲ್ಲಿ ಶುಭಾರಂಭ ➤ ಕಡಬದ ಹಿಂದುಸ್ಥಾನ್ ರಬ್ಬರ್ ಟ್ರೇಡರ್ಸ್ ರವರ ಸಹಸಂಸ್ಥೆ

error: Content is protected !!
Scroll to Top