ಸೈಕಲ್ ಮೇಲೆ ಹರಿದ ಜೆಸಿಬಿ ➤ ಬಾಲಕ ದುರ್ಮರಣ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 06. ಸೈಕಲ್ ಮೇಲೆ ಜೆಸಿಬಿ ಹರಿದು ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಕನ್ಯಾನ ಸಮೀಪದ ಕಣಿಯೂರು ಎಂಬಲ್ಲಿ ನಡೆದಿದೆ.


ಮೃತ ಬಾಲಕನನ್ನು ಕಣಿಯೂರು ಹಸೈನಾರ್ ಎಂಬವರ ಪುತ್ರ ಏಳನೇ ತರಗತಿ ವಿದ್ಯಾರ್ಥಿ ಆಖಿಲ್ ಎಂದು ತಿಳಿದುಬಂದಿದೆ. ಈತ ಭಾನುವಾರದಂದು ಸಂಜೆ ಹಾಲಿಗೆ ಡಿಪೋಗೆ ಹೋಗಿ ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಜೆಸಿಬಿ ಚಾಲಕ ಗದಗ ಮೂಲದವನಾಗಿದ್ದು, ಪಾನಮತ್ತನಾಗಿದ್ದ ಎನ್ನಲಾಗಿದೆ. ಇನ್ನು ಘಟನೆಯ ಬಳಿಕ ಚಾಲಕ, ಬಾಲಕನ ಮೃತದೇಹ ಮತ್ತು ಸೈಕಲ್ ನ್ನು ಜೆಸಿಬಿಯ ಕೊಕ್ಕಿನ ಮೂಲಕ ಪಕ್ಕಕ್ಕೆ ಸರಿಸಿ ಪರಾರಿಯಾಗಲು ಯತ್ನಿಸಿದ್ದು, ವಿಷಯ ತಿಳಿದು ಸಾರ್ವಜನಿಕರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

Also Read  ಪುತ್ತೂರು: ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಮುಸ್ಲಿಂ ಯುವಕ, ಹಿಂದೂ ಯುವತಿ ➤ ಪೊಲೀಸ್ ವಶಕ್ಕೆ

error: Content is protected !!
Scroll to Top