ಸೂರಿಕುಮೇರು: ಸರಣಿ ಕಳ್ಳತನ ➤ ಅಂಗಡಿ ಹಾಗೂ ಎರಡು ಮನೆಯ ಬೀಗ ಮುರಿದು ನಗ-ನಗದು ಕಳವು

(ನ್ಯೂಸ್ ಕಡಬ) newskadaba.com ಮಾಣಿ, ಜೂ. 06. ಎರಡು ಮನೆ ಹಾಗೂ ಒಂದು ಚಿಕನ್ ಸ್ಟಾಲ್ ಗೆ ನುಗ್ಗಿದ ಕಳ್ಳರು ಹಣ ಹಾಗೂ ನಗದು ಕದ್ದೊಯ್ದ ಘಟನೆ ಇಲ್ಲಿನ ಸೂರಿಕುಮೇರು ಎಂಬಲ್ಲಿ ನಡೆದಿದೆ.


ಮನೆಗೆ ನುಗ್ಗಿದ ಕಳ್ಳರು ಕಪಾಟುಗಳನ್ನೆಲ್ಲಾ ಜಾಲಾಡಿ ಒಂದು ಮನೆಯಿಂದ ಬಾಡಿಗೆ ನೀಡಲು ತೆಗೆದಿಟ್ಟಿದ್ದ ಒಂದು ಸಾವಿರ ಹಣ, ಕಾಣಿಕೆ ಡಬ್ಬಿಯಲ್ಲಿದ್ದ ಹಣ ಮತ್ತು ಚಿನ್ನವೆಂದು ಭಾವಿಸಿ ಕೆಲವು ಗೋಲ್ಡ್ ಆಭರಣಗಳು, ಬೆಳ್ಳಿಯ ಕಾಲು ಚೈನ್ ಹಾಗೂ ಇನ್ನೊಂದು ಮನೆಯ ಕಪಾಟು ಜಾಲಾಡಿ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಕಳ್ಳತನ ಮಾಡಿದ್ದಾರೆ. ಕೋಳಿ ಅಂಗಡಿಯಲ್ಲಿ ಏನೂ ಸಿಗದೆ ಅಲ್ಲಿದ್ದ ಕೆಲವು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದಾರೆ. ಕಳ್ಳತನ ನಡೆದ ಮನೆಯು ಬಾಡಿಗೆಯದ್ದಾಗಿದ್ದು ಬಡ ಕುಟುಂಬಗಳು ಅದರಲ್ಲಿ ನೆಲೆಸಿತ್ತು, ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಒಂದು ಕುಟುಂಬ ಬೀಗಹಾಕಿ ಹೋಗಿದ್ದರು. ಇನ್ನೊಂದು ಮನೆಯವರು ಸಂಬಂಧಿಕರ ಮನೆಗೆ ಹೋಗಿದ್ದ ಸಮಯದಲ್ಲೇ ಕಳ್ಳತನ ನಡೆದಿದೆ ಎನ್ನಲಾಗಿದೆ. ಚಿಕನ್ ಸ್ಟಾಲ್ ನವರು ಬೆಳಿಗ್ಗೆ ಅಂಗಡಿ ತೆರೆಯಲು ಬಂದ ವೇಳೆ ತುಂಡು ಮಾಡಿದ ಬೀಗಗಳು ಕಾಣ ಸಿಕ್ಕಿದ್ದು ಘಟನೆ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಕಳ್ಳತನ ನಡೆಸುವ ಜಾಲವೊಂದು ವಿವಿಧ ಕಡೆ ಸಕ್ರಿಯವಾಗಿದ್ದು ಯಾರೂ ಮನೆ ಬಿಟ್ಟು ಎಲ್ಲೂ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.

Also Read  ಜ.31 ರಂದು ಕಡಬದ ಕೊಂಬಾರಿನಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ➤ ಪುತ್ತೂರು ಎಸಿ ಯತೀಶ್ ಉಳ್ಳಾಲ್ ಅಧ್ಯಕ್ಷತೆಯಲ್ಲಿ ಕಡಬದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ

error: Content is protected !!
Scroll to Top