ಸಾಲು ಮರದ ತಿಮ್ಮಕ್ಕ ನಮ್ಮ ಆದರ್ಶವಾಗಲಿ- ಖಿದ್ಮಾ ಸಂಚಾಲಕ ಆಮಿರ್ ಬನ್ನೂರು ➤ ಖಿದ್ಮಾ ಫೌಂಡೇಶನ್ ಕರ್ನಾಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ

(ನ್ಯೂಸ್ ಕಡಬ) newskadaba.com ಜೂ. 06.‌ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಖಿದ್ಮಾ ಫೌಂಡೇಶನ್ ಕರ್ನಾಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕರಾದ ಅಮೀರ್ ಬನ್ನೂರು ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ನಾವು ಉತ್ತಮ ಆರೋಗ್ಯವಂತರಾಗಬೇಕಾದರೆ ನಮ್ಮ ಪರಿಸರ ಶುದ್ಧ ವಾತಾವರಣದಿಂದ ಕೂಡಿರಬೇಕು. ಪರಿಸರ ಸಂರಕ್ಷಣೆಯ ವಿಷಯದಲ್ಲಿ ಸಾಲು ಮರದ ತಿಮ್ಮಕ್ಕ ನಮ್ಮ ಆರ್ದಶವಾಗಬೇಕು. ಗಿಡ ಮರಗಳನ್ನು ನೆಡುವ ಮೂಲಕ ನಾವು ಅವರ ದಾರಿಯಲ್ಲಿ ನಡೆಯಲು ಪ್ರಯತ್ನಿಸಬೇಕೆಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸೈದುಸಾಬ್ ಹಿರೇಮನಿ, ಅರವಿಂದ್ ಕುಮಾರ್, ಮೆಹಬೂಬ್ ಸಾಬ್ ಆರ್ ಬಳ್ಳಿನ್, ಶೇಕರ್, ಉಮೇಶ್ ಕಲಾಲ್, ಸದ್ದಾಂ ಸಾಬ್ ಹಿರೇಮನಿ, ಮರ್ತುಜಾ ನಾಗನೂರು ಹಾಗೂ ಮಂಜು ಕಲಾಲ್ ಉಪಸ್ಥಿತರಿದ್ದರು.

Also Read  ಮಂಗಳೂರು: ಶ್ರೀಮತಿ ಶೆಟ್ಟಿ ಬರ್ಬರ ಕೊಲೆ ಪ್ರಕರಣ- ಮೂವರ ಕೃತ್ಯ ಸಾಬೀತು

error: Content is protected !!
Scroll to Top